ಸಜೀಪ ಮುನ್ನೂರು ಗ್ರಾಮ ಸಭೆ…

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮ ಪಂಚಾಯತಿನಲ್ಲಿ ಪ್ರಥಮ ಸುತ್ತಿನ ಗ್ರಾಮ ಸಭೆ ಜೂ.31 ರಂದು ಪಂಚಾಯತ್ ಅಧ್ಯಕ್ಷ ಸಬೀನಾ ಅಧ್ಯಕ್ಷತೆಯಲ್ಲಿ ಜರಗಿತು.
ನೋಡಲ್ ಅಧಿಕಾರಿಯಾಗಿ ಬಂಟ್ವಾಳ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್ ಕಲಾಪವನ್ನು ನಡೆಸಿಕೊಟ್ಟರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆ ಮಾಹಿತಿ ನೀಡಿದರು. ಗ್ರಾಮದಾದ್ಯಂತ ತ್ಯಾಜ್ಯ ವಿಲೇವಾರಿ ಮಾಡುವಂತೆ ಸ್ವಚ್ಛ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಗ್ರಾಮಸ್ಥರಾದ ರೋಷನ್, ಮುಸ್ತಾಪ, ಅನ್ಸರ್, ಸೋಮನಾಥ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಈ ಬಗ್ಗೆ ಆಗಸ್ಟ್ 22ರಂದು ವಿಶೇಷ ಗ್ರಾಮ ಸಭೆ ಜರುಗಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಕಳೆದ 30 ವರ್ಷಗಳಿಂದ ನನಗುದಿಗೆ ಬಿದ್ದ ಸಾರ್ವಜನಿಕ ಸ್ಮಶಾನ ನಿರ್ಮಿಸುವಂತೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯ್ಯೂಸುಪ್ ಕರಂದಾಡಿ, ಶರೀಫ್ ನಂದಾವರ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕಬೀರ್ ಹಾಲಾಡಿ, ಧನಂಜಯ ಶೆಟ್ಟಿ ಒತ್ತಾಯಿಸಿದರು. ಬಂಟ್ವಾಳ ತಾಲೂಕಿನಲ್ಲಿ ಸ್ಮಶಾನರಹಿತ ಗ್ರಾಮ ವಾಗಿ ಸಜೀಪ ಮುನ್ನೂರು ಗ್ರಾಮ ಏಕೈಕ ಗ್ರಾಮವಾಗಿ ಉಳಿದಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯರು, ಜಿಲ್ಲಾಧಿಕಾರಿಗಳು, ಶಾಸಕರು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ವಿಶೇಷ ಅನುದಾನದಿಂದ ರಸ್ತೆ ಸಹಿತ ನಕ್ಷೆ ಮತ್ತು ಅಂದಾಜು ಪಟ್ಟಿಯೊಂದಿಗೆ ಲಿಖಿತ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ತುಂಬೆ ಡ್ಯಾಮ್ ವರತೆ ಪ್ರದೇಶಕ್ಕೆ ನ್ಯಾಯವಾಗಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ರೈತರ ಸಮಸ್ಯೆಗಳು ಪರಿಹಾರಕ್ಕೆ ಸಂಬಂಧಿತ ರಿಗೆ ಲಿಖಿತ ಮನವಿ ಸಲ್ಲಿಸಲು ಎಂ ಸುಬ್ರಹ್ಮಣ್ಯ ಬಟ್ ಒತ್ತಾಯಿಸಿದರು.

Sponsors

Related Articles

Back to top button