ಸುಭಾಷ್ ಯುವಕ ಮಂಡಲ (ರಿ) ಸಜಿಪ ಮೂಡ ಇದರ ಆಶ್ರಯದಲ್ಲಿ ವನಮಹೋತ್ಸವ…

ಬಂಟ್ವಾಳ: ಸುಭಾಷ್ ಯುವಕ ಮಂಡಲ (ರಿ) ಸಜಿಪ ಮೂಡ ಇದರ ಆಶ್ರಯದಲ್ಲಿ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ, ಉಪ ವಲಯ ಅರಣ್ಯ ಅಧಿಕಾರಿ ಯಶೋಧರ, ವನಪಾಲಕಿ ರೇಖಾ ಇವರ ಸಹಯೋಗದೊಂದಿಗೆ ಜೂ. 30 ರಂದು ವನಮಹೋತ್ಸವ ನಡೆಯಿತು.
ಸಾರ್ವಜನಿಕ ಸ್ಥಳದಲ್ಲಿ ರಸ್ತೆ ಬದಿ ಗಿಡ ನಾಟಿ ಮಾಡುವ ಮೂಲಕ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಸುಭಾಷ್ ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಆಳ್ವ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಪಂಚಾಯಿತಿ ಸದಸ್ಯ ಯೋಗೇಶ್ ಬೆಲ್ಚಾಡಕೂಡೂರು, ಶಾರದಾ ಪೂಜಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬರ್ಕೆ, ಗಿರೀಶ್ ಕುಮಾರ್ ಪೆರ್ವ ಮೊದಲಾದವರು ಉಪಸ್ಥಿತರಿದ್ದರು.