ಮಿತ್ತಮಜಲು ಕ್ಷೇತ್ರದ ನೂತನ ಗೋಪುರಗಳ ಲೋಕಾರ್ಪಣೆ ಬಗ್ಗೆ ದಿನ ನಿಗದಿ…
![whatsapp image 2025 02 10 at 8.34.26 am](wp-content/uploads/2025/02/whatsapp-image-2025-02-10-at-8.34.26-am-780x470.jpeg)
ಬಂಟ್ವಾಳ: ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾ ಲ್ದಿ ಶ್ರೀ ನಾಲ್ಕೈತಾಯ ಹಾಗೂ ಪರಿವಾರದೈವಗಳ ಮಿತ್ತಮಜಲು ಕ್ಷೇತ್ರದ ನೂತನ ಗೋಪುರಗಳ ಲೋಕಾರ್ಪಣೆ ಬಗ್ಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಭೇಟಿ ಮಾಡಿ ದಿನ ನಿಗದಿ ಪಡಿಸಲಾಯಿತು.
ಅಂದಾಜು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ವಾಸ್ತು ಪ್ರಕಾರ ಪುನರ್ ನಿರ್ಮಾಣಗೊಳ್ಳುತ್ತಿರುವ ನೂತನ ಗೋಪುರಗಳ ಲೋಕಾರ್ಪಣೆ ಎ.2 ಮತ್ತು 3 ರಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ತಾಂತ್ರಿಕ, ವೈದಿಕ, ಸಾಂಸ್ಕೃತಿಕ, ಅನ್ನದಾನ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು, ಈ ಬಗ್ಗೆ ತಂತ್ರಿಗಳ ಭೇಟಿ ಮಾಡಿ ದಿನ ನಿಗದಿಪಡಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಬರಂಗರೆ ಶಿವಪ್ರಸಾದ್ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಎಸ್ ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜಿಪಮೂಡ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂoಜ ಮೊದಲಾದವರು ಉಪಸ್ಥಿತರಿದ್ದರು.