ಪೇರಡ್ಕ ಗೂನಡ್ಕ ಉರೂಸ್: ದೇಶದ ನಿವೃತ್ತ ಯೋಧರಿಗೆ ದೇಶ ರಕ್ಷಕರಿಗೆ ಸನ್ಮಾನ…

ಸುಳ್ಯ :ಸಂಪಾಜೆ ಗ್ರಾಮದ ಪೇರಡ್ಕ – ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನ ಉರೂಸ್ ಕಾರ್ಯಕ್ರಮದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರುಗಳಾದ ವಸಂತ ಪೆಲ್ತಡ್ಕ, ಪಧ್ಮನಾಭ ಪೆಲ್ತಡ್ಕ, ಹಾಗೂ ಜಮ್ಮು ಕಾಶ್ಮೀರ ಸಿ.ಆರ್.ಪಿ ಇನ್ ಸ್ಪೆಕ್ಟರ್ ಅನ್ವರ್ ಪಿ.ಎಂ ತೆಕ್ಕಿಲ್ ಇವರನ್ನು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ ಶಹೀದ್, ಖತೀಬರಾದ ಬಹು| ನಈಮ್ ಫೈಝಿ ಅಝ್ಹರಿ, ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕೆ.ವಿ.ಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್, ಪ್ರೊಫೆಸರ್ ಡಾ| ಲಕ್ಷ್ಮಿಶ, ಸಜ್ಜನ ಪ್ರತಿಷ್ಟಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಇಕ್ಬಾಲ್ ಬಾಳಿಲ, ಜಮಾಅತ್ ಉಪಾಧ್ಯಕ್ಷ ಟಿ.ಬಿ ಹನೀಫ್, ಪ್ರಧಾನ ಕಾರ್ಯದರ್ಶಿಪಿ.ಕೆ. ಉಮ್ಮರ್ ಗೂನಡ್ಕ, ಕಾರ್ಯದರ್ಶಿ ಕೆ.ಎಂ ಇಸ್ಲಾಯಿಲ್ ಅರಂತೋಡು, ಎಸ್.ಕೆ ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.

whatsapp image 2025 02 06 at 12.19.06 pm

Related Articles

Back to top button