ಸಜಿಪ ಮುನ್ನೂರು ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಮನವಿ…

ಬಂಟ್ವಾಳ: ಸಜಿಪ ಮುನ್ನೂರು ಸಾರ್ವಜನಿಕ ರುದ್ರಭೂಮಿ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಹಶೀಲ್ದಾರ್ ಅವರನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದ ನಿಯೋಗ ಆ. 22 ರಂದು ಭೇಟಿ ಮಾಡಿ ಲಿಖತ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೂಸುಫ್ ಕರoದಾಡಿ, ಎಂ ಪರಮೇಶ್ವರ, ಸಜಿಪ ಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ ಪೂಂಜ, ಎಂ ಸುಬ್ರಹ್ಮಣ್ಯ ಭಟ್, ಸುಧೀರ್ ಖಾನ್ ಸಾರೆ ಧನಂಜಯ ಶೆಟ್ಟಿ, ಎಂ ಕೆ ಉಮರ್ ಹಬ್ಬ, ಜಯಂತಿ ಶಾಂತಿನಗರ, ವಿಶ್ವನಾಥ್ ಮರ್ತಾಜೆ, ಜನಾರ್ದನ ಮತ್ತಿತರರಿದ್ದರು.