ಹಿರಿಯ ಪ್ರಾಥಮಿಕ ಶಾಲೆ ಮಾಣಿ – ಶಿಕ್ಷಕರಿಗೆ ಭಾಷಾ ಬೋಧನೆಯ ತರಬೇತು ಕಾರ್ಯಕ್ರಮ…

ಕನ್ನಡ ಭಾಷಾ ಕಲಿಕೆಗೆ ಮಹತ್ವ ನೀಡಿ - ಜಯಾನಂದ ಪೆರಾಜೆ...

ಬಂಟ್ವಾಳ: ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನ ಸಂಪಾದಿಸಲು ಪ್ರಶ್ನೆ ಕೇಳುವ ಧೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪಠ್ಯಶಿಕ್ಷಣ ಸಂಪನ್ಮೂಲ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಹೇಳಿದರು.
ಅವರು ದ.ಕ.ಜಿ.ಪ.ಮಾ.ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಡಿ. 18 ರಂದು ಶಿಕ್ಷಕರಿಗೆ ಏರ್ಪಡಿಸಲಾದ ಭಾಷಾ ಬೋಧನೆಯ ತರಬೇತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಲಿ-ಕಲಿ ಶಿಕ್ಷಕರು ಚಟುವಟಿಕೆಯೊಂದಿಗೆ ಪರಿಣಾಮಕಾರಿಯಾಗಿ ಕನ್ನಡ ಭಾಷಾ ಕಲಿಕೆಯಲ್ಲಿ ಉಚ್ಚಾರ ಮತ್ತು ಅಕ್ಷರ ದೋಷಗಳನ್ನು ತಿದ್ದುವ ಬಗ್ಗೆ ಚರ್ಚಿಸಲಾಯಿತು. ಮಮತಾ ಕಿರಣ್ ಬಂಟ್ರಿಂಜ , ಶಾಂತಿ ಪಾಯಸ್ ಸತ್ತಿಕಲ್ಲು, ಚೇತನಾ ಬಾಲ್ತಿಲ ಕಂಠಿಕ, ಶೀಲಾವತಿ ಮಾಣಿ ಅನಿಸಿಕೆ ವ್ಯಕ್ತಪಡಿಸಿದರು. ಸಮಾಲೋಚನಾ ಸಭೆಯಲ್ಲಿ ಮಾಣಿ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಣಿ ವಲಯ ಸಿಆರ್‍ಪಿ ಸತೀಶ್ ಸ್ವಾಗತಿಸಿದರು. ಶಿಕ್ಷಕ ನಾಗೇಶ್ ಮಾಣಿ ವಂದಿಸಿದರು. ಕೆದಿಲ ಸಿಆರ್‍ಪಿ ಸುಧಾಕರ ಭಟ್ , ಕಾರ್ಲ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ, ಶಿಕ್ಷಣ ಸಂಯೋಜಕಿ ಪ್ರತಿಮಾ ವೈ ಶುಭ ಹಾರೈಸಿದರು.

Sponsors

Related Articles

Back to top button