ಸಂಘಟಕ,ಪತ್ರಕರ್ತ,ಸಾಹಿತಿ ಜಯಾನಂದ ಪೆರಾಜೆಗೆ “ಕವಿಕಾವ್ಯ ವಿಭೂಷಣ” ಪ್ರಶಸ್ತಿ…
ಕಾಸರಗೋಡು,ಫೆ. 7: ಹಿರಿಯ ಸಾಹಿತಿ, ಪತ್ರಕರ್ತ, ಕೇರಳ ರಾಜ್ಯ ಕರ್ನಾಟಕ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆಯವರಿಗೆ ಕವಿಕಾವ್ಯ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಸರಗೋಡು ಕನ್ನಡಭವನ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಕನ್ನಡಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ 22.02.2026 ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್ ” ವೇದಿಕೆಯಲ್ಲಿ ನಾಡೋಜ ಡಾ.ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಶ್ರೀಮದ್ ಎಡನೀರು ಶ್ರೀಗಳ ಹಾಗೂ ಗದಗ ಜಿಲ್ಲೆಯ ಶ್ರೀ ರಮೇಶ ಮಹಾಸ್ವಾಮಿ, ಗೋವಿನಾಳ ಇವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ. 2026 ನಡೆಯಲಿದೆ. ಸಮ್ಮೇಳನದಲ್ಲಿ ಪ್ರತಿಷ್ಠಿತ “ಕವಿ ಕಾವ್ಯ ವಿಭೂಷಣ ” ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದುಕೇರಳ ರಾಜ್ಯ ಕ.ಚುಸಾ.ಪ. ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ , ಸ್ವಾಗತ ಸಮಿತಿ ಅಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





