ವಿ ಡಿ ಸತೀಶನ್ ಅವರಿಗೆ ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಂದ ಸನ್ಮಾನ…

ಕಾಸರಗೋಡು:ಕಾಸರಗೋಡಿನ ಕುಂಬ್ಳೆಯಿಂದ ತ್ರಿವೆಂಡ್ರಮ್ ವರೆಗೆ ನಡೆಯುವ ಕೇರಳ ರಾಜ್ಯ “ಹೊಸ ಯುಗ ಯಾತ್ರೆಯನ್ನು” ಪ್ರಾರಂಭಿಸಲು ಕಾಸರಗೋಡಿಗೆ ಆಗಮಿಸಿದ ಕೇರಳದ ವಿರೋದ ಪಕ್ಷದ ನಾಯಕ ವಿ ಡಿ ಸತೀಷನ್ ಅವರನ್ನು ಕಾಸರಗೋಡಿನ ಅತಿಥಿ ಗೃಹದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ (ಸಚಿವ ಸ್ಥಾನಮಾನ) ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸತ್ ಸದಸ್ಯೆ ಕುಮಾರಿ ರಮ್ಯ ಹರಿದಾಸ್, ಇಂಟಕ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಜ್ ಎಡಾನಿ, ಕರ್ನಾಟಕ ಎನ್ ಎಸ್ ಯು ಐ ನಾಯಕ ಟಿ ಎಂ ಶಾಜ್ ತೆಕ್ಕಿಲ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ಶ್ರೀಮತಿ ಪ್ರಿಯರಂಜನ್ ದಾಸ್ ಮುನ್ಶಿ, ರಮೇಶ್ ಚೆನ್ನಿತ್ತಲ,ಮನ್ಸೂರ್ ಖಾನ್ ರೋಜಿ ಎಂ ಜಾನ್ ಸಹಿತ ಹಲವಾರು ನಾಯಕರು ಬಾಗವಹಿಸಿದರು.

whatsapp image 2026 02 06 at 4.57.38 pm

Related Articles

Back to top button