ಸಂಸ್ಥೆಯ ಜವಾಬ್ದಾರಿಯು ಎಲ್ಲರ ಹೊಣೆಗಾರಿಕೆ ಯಾಗಬೇಕು – ನ್ಯಾಯವಾದಿ ಕೆ.ಆರ್. ಪಂಡಿತ್…
ಮೂಡುಬಿದಿರೆ: ಯಾವುದೇ ಸಂಸ್ಥೆಯ ಉದ್ದೇಶಗಳು ಈಡೇರಬೇಕಾದರೆ ಪದಾಧಿಕಾರಿಗಳ ಜೊತೆಗೆ ಎಲ್ಲರೂ ಸಹಕಾರ ನೀಡಬೇಕು. ಹಿರಿಯರಿಗಾಗಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅದಕ್ಕಿಂತ ಭಿನ್ನವಾಗಿ ಹಿರಿಯರ ಸೇವಾ ಪ್ರತಿಷ್ಠಾನವು ಸೇವಾ ಭಾವನೆಯಿಂದ ಕಾರ್ಯನಿರ್ವಹಿಸುವುದು ಉತ್ತಮ ಬೆಳವಣಿಗೆಯೆಂದು ನ್ಯಾಯವಾದಿ ಕೆ.ಆರ್. ಪಂಡಿತ್ ತಿಳಿಸಿದರು.
ಮೂಡುಬಿದಿರೆ ಸೇವಾ ಸಹಕಾರಿ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಮೂಡಬಿದ್ರೆ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೀಪ ಬೆಳಗಿಸಿ ಘಟಕದ ಆರಂಭಕ್ಕೆ ಚಾಲನೆ ನೀಡಿದ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್ ಮಾತನಾಡಿ ಹಿರಿಯರು ತಮ್ಮ ಅನುಭವಗಳನ್ನು ಸಮಾಜದ ಒಳಿತಿಗೆ ಹಂಚಿಕೊಳ್ಳಲು ಘಟಕವನ್ನು ಆರಂಭಿಸಲಾಗಿದ್ದು ಇದನ್ನು ಇನ್ನಷ್ಟು ಬಲಪಡಿಸಿ ಹಿರಿಯರ ಸಮಾವೇಶವನ್ನು ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ .ಎ.ವಿ.ನಾರಾಯಣ ಉದ್ದೇಶ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ತಿಳಿಸಿದರು. ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಸತ್ಸಂಗವನ್ನು ನಡೆಸಿ ಕೊಟ್ಟರು ಮತ್ತು ಪ್ರತಿ ತಾಲೂಕು ಘಟಕಗಳ ಬಲವರ್ಧನೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಹಿರಿಯ ನ್ಯಾಯವಾದಿ ಎಂ.ಎಸ್. ಕೋಟ್ಯಾನ್ ಶುಭ ಹಾರೈಸಿದರು. ಮೂಡುಬಿದಿರೆ ಧವಳ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಪಿ. ಗಣಪಯ್ಯ ಭಟ್ ಪ್ರತಿಷ್ಠಾನದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೂಡುಬಿದಿರೆ ಘಟಕದ ಅಧ್ಯಕ್ಷರಾಗಿ ಕೆ.ಆರ್. ಪಂಡಿತ್ ಮತ್ತು ಕಾರ್ಯದರ್ಶಿಯಾಗಿ ಸದಾನಂದ ನಾರಾವಿ ಆಯ್ಕೆಯಾದರು.
ಪ್ರತಿಷ್ಠಾನದ ಕೇಂದ್ರ ಸಮಿತಿಯ ಡಾ. ಬಿ.ಎನ್. ಮಹಾಲಿಂಗ ಭಟ್, ವೇದವ್ಯಾಸ ರಾಮಕುಂಜ, ಲೋಕೇಶ್ ಹೆಗ್ದೆ ಪುತ್ತೂರು, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಕೆ. ಉದಯಶಂಕರ ರೈ ಪುಣಚ, ಎ. ಕೃಷ್ಣಶರ್ಮ, ತಾಲೂಕು ಸಂಚಾಲಕರಾದ ಸಂತೋಷ್ ಕಾವೂರು, ಸಂತೋಷ್ ಕುತ್ತಾರು, ಶ್ರೀಮತಿ ದೇವಿ ಕೈಯೂರು, ಮೂಡಬಿದ್ರೆ ಘಟಕದ ಎಂ. ಚಂದ್ರಹಾಸ ದೇವಾಡಿಗ ಉಮೇಶ್ ಭಟ್, ದಯಾನಂದ ಪಂಡಿತ್, ಅಂಡಾರು ಗುಣಪಾಲ ಹೆಗ್ಡೆ, ನಿರಂಜನ್ ಕುಮಾರ್ ಶೆಟ್ಟಿ, ಎನ್. ಧರಸೇನಾ ಶೆಟ್ಟಿ, ಚಂದ್ರಶೇಖರ ಎಂ, ಸದಾನಂದ ನಾರಾವಿ, ಎಂ. ಸುಖರಾಜ ಇಂದ್ರ, ನಾಗೇಶ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಶ್ರೀಮತಿ ವತ್ಸಲಾ ರಾಜ್ಞಿ ಪ್ರಾರ್ಥಿಸಿದರು. ಸಂಚಾಲಕ ನಾರ್ಯ ಶ್ರೀನಿವಾಸ ಶೆಟ್ಟಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಪ್ರತಿಷ್ಠಾನದ ಟ್ರಸ್ಟಿ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.