ಸಮಸ್ತ ಹತ್ತನೆ ತರಗತಿಯಲ್ಲಿ ಸುಳ್ಯ ರೇಂಜ್ ಮಟ್ಟದಲ್ಲಿ ಆಯಿಶತ್ ರಫ್ನತ್ ನಿಶಾ ಪ್ರಥಮ…

ಸುಳ್ಯ: ಸಂಪಾಜೆ ಪೇರಡ್ಕ ಗೂನಡ್ಕ ತೆಕ್ಕಿಲ್ ಮಹಮ್ಮದ ಹಾಜಿ ಮೆಮೋರಿಯಲ್ ತಕ್ ವೀಯತುಲ್ ಇಸ್ಲಾಂ ಮದರಸದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಹತ್ತನೆ ತರಗತಿಯ ವಿದ್ಯಾರ್ಥಿನಿ ಆಯಿಶತ್ ರಫ್ನತ್ ನಿಶಾ ಸುಳ್ಯ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.
7ನೇ ತರಗತಿಯಲ್ಲೂ ಇವರೇ ಪ್ರಥಮ ಸ್ಥಾನಿಯಾಗಿದ್ದರು. ಇವರು ಗೂನಡ್ಕ ದರ್ಕಾಸಿನ ಇಬ್ರಾಹಿಂ ನಡುಬೈಲು, ಆಯಿಶಾ ಜಿ ಎಂ ಇವರ ಸುಪುತ್ರಿ . ಇವರ ಸಾಧನೆಗೆ ವಿದ್ಯಾರ್ಥಿನಿ ಪೋಷಕರನ್ನು ಹಾಗು ಖತೀಬ್ ಉಸ್ತಾದರಾದ ರಿಯಾಝ್ ಫೈಝಿ ಎಮ್ಮೆಮಾಡು ಇವರನ್ನು ಜಮಅತಿನ ಗೌರವ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಅಧ್ಯಕ್ಷರಾದ ಎಸ್ ಅಲಿ ಹಾಜಿ ಕಾರ್ಯದರ್ಶಿ ಟಿ ಎಂ ರಝಾಕ್ ಹಾಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಅಭಿನಂದಿಸಿದ್ದಾರೆ.

Sponsors

Related Articles

Back to top button