ಆ .9 – ಬಂಟ್ವಾಳದಲ್ಲಿ ಅಖಿಲ ಕರ್ನಾಟಕ ಹಿರಿಯರ ಚಿಂತನಾ ಸಮಾವೇಶ- ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ಚಿಂತನ-ಮಂಥನ…

ಬಂಟ್ವಾಳ ಜು.13:ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನ ಇದರ ವತಿಯಿಂದ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮ ಮೇರಮಜಲು ಇದರ ಸಂಚಾಲಕ ಹರೀಶ್ ಪೆರ್ಗಡೆಯವರನ್ನು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ಅಗಸ್ಟ್ 9 ರಂದು ನಡೆಯುವ ಹಿರಿಯರ ಚಿಂತನ ಸಮಾವೇಶದಲ್ಲಿ ಗೌರವಾರ್ಪಣೆ ಮಾಡಿ ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಕಟಿಸಿದ್ದಾರೆ.
ಅವರು ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಹಿರಿಯರ ಚಿಂತನಾ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಲದೆ ನಿವೃತ್ತ ಮುಖ್ಯೋಪಾದ್ಯಾಯರಾದ ನಾರಾಯಣ ನಾಯಕ್ ಕರ್ಪೆ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಸಂಜೀವ ನಾಯಕ್ ಕಲ್ಲೆಗ ಇವರನ್ನು ಸನ್ಮಾನಿಸಲಾಗುವುದು ಎಂದರು.
ಸಭೆಯನ್ನು ನಿವೃತ್ತ ಶಿಕ್ಷಕರಾದ ಶಂಕರ ನಾರಾಯಣ ಹೊಳ್ಳ ಉದ್ಘಾಟಿಸಿ ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶುಭ ಹಾರೈಸಿದರು.
ಸಮಾವೇಶದಲ್ಲಿ ಪೂರ್ವಾಹ್ನ 7.30ರಿಂದ ಗಣಹೋಮ, ರುದ್ರಪಠಣ ನಡೆಯಲಿದ್ದು ಪ್ರಸಿದ್ಧ ಗಮಕಿ ಮಂಜುಳಾ ಸುಬ್ರಮಣ್ಯ ಭಟ್ ಮಂಚಿ ಗಮಕ ವಾಚನ ಮಾಡಲಿದ್ದು ಈಶ್ವರ ಭಟ್ ಗುಂಡ್ಯಡ್ಕ ವ್ಯಾಖ್ಯಾನ ಮಾಡುವರು. ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇಲ್ಲಿನ ಪರಮಪೂಜ್ಯ ಸ್ವಾಮಿ ಚೈತನ್ಯಾನಂದಜಿ ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಚಿಂತನಾ ಮಂಥನ ಗೋಷ್ಠಿ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರತಿಷ್ಠಾನದ ಪ್ರಮುಖ ಪದಾಧಿಕಾರಿಗಳಾದ ಭಾಸ್ಕರ ಬಾರ್ಯ ಪುತ್ತೂರು, ಅನಾರು ಕೃಷ್ಣ ಶರ್ಮ ಬಿ.ಸಿ.ರೋಡು, ಫ್ರೊ. ವೇದವ್ಯಾಸ ರಾಮಕುಂಜ, ಎಮ್ . ಜಯರಾಮ ಭಂಡಾರಿ ಧರ್ಮಸ್ಥಳ, ಡಾ. ಬಿ.ಎನ್ ಮಹಾಲಿಂಗ ಭಟ್ ಬಿಲ್ಲಂಪದವು , ಜಯರಾಮ ಪೂಜಾರಿ ನರಿಕೊಂಬು , ರಾಜಮಣಿ ರಾಮಕುಂಜ, ಭಾರತಿ ಬಂಟ್ವಾಳ ಉಪಸ್ಥಿತರಿದ್ದರು.
ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳಾದ ಜಯಾನಂದ ಪೆರಾಜೆ, ಪ್ರೊ. ಸುಬ್ರಾಯ ಮಡಿವಾಳ,ಭವಾನಿ ಶಂಕರ ಶೆಟ್ಟಿ, ಸೀತಾರಾಮ ಶೆಟ್ಟಿ ಉಜಿರೆ, ಸುಮಿತ್ರಾ ಎಸ್. ಮಡಿವಾಳ, ಪ್ರೇಮಲತಾ ರಾವ್, ಸೀತಾರಾಮ ಶೆಟ್ಟಿ, ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಸಲಹೆ ಸೂಚನೆಗಳನಿತ್ತರು
ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.





