“ಬುಲ್ಡೋಜರ್‌ ನ್ಯಾಯ’ ದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿ – ಅಬ್ದುಲ್ ರಹಿಮಾನ್ ಮೊಗರ್ಪಣೆ ಸ್ವಾಗತ…

ಸುಳ್ಯ: ನಾನಾ ಪ್ರಕರಣಗಳಲ್ಲಿಆರೋಪಿಗಳ ಮನೆ, ಆಸ್ತಿಗಳನ್ನು ಉರುಳಿಸುವ “ಬುಲ್ಡೋಜರ್‌ ನ್ಯಾಯ’ ದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. ಅಲ್ಲದೆ ಅಪರಾಧ ಪ್ರಕರಣಗಳಲ್ಲಿ ಆರೋಪಿಯು ಅಪರಾಧಿಯೇ ಆಗಿದ್ದರೂ, ಆತನ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಸ್ವಾಗತಾರ್ಹ ಆದೇಶವಾಗಿದೆ ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್, ದ.ಕ ಇದರ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳ ಮನೆಗಳನ್ನು ಅಧಿಕಾರಿಗಳು ಕೆಡಹುವುದು  ದೇಶಾದ್ಯ೦ತ ವರದಿಯಾಗುತ್ತಿವೆ. ಅದರಲ್ಲೂ ಮಧ್ಯಪ್ರದೇಶದಲ್ಲಂತೂ ಅಪರಾಧಿಗಳ ನಿವಾಸಗಳನ್ನು ಧ್ವಂಸಗೊಳಿಸುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಸಂವಿಧಾನ ಬಾಹಿರ ಬುಲ್ಡೋಜರ್‌ ಕ್ರಮವನ್ನು ತಡೆಯಬೇಕೆಂದು ಘನ ಸುಪ್ರೀಂ ಕೋರ್ಟ್‌ ಆದೇಶಿಸಿರುವುದನ್ನು ಅಬ್ದುಲ್ ರಹಿಮಾನ್ ಮೊಗರ್ಪಣೆ ಸ್ವಾಗತಿಸಿದ್ದಾರೆ.

Related Articles

Back to top button