ಬಹುಮುಖ ಪ್ರತಿಭೆಯ ರಿಶಿತ್ ರಾಜ್ ಗೆ ಗೌರವ ಸನ್ಮಾನ…
ಪುತ್ತೂರು: ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು,(ರಿ) ಪುತ್ತೂರು , ಶ್ರೀಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಪುತ್ತೂರು ಹಾಗೂ ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಸಹಯೋಗದಲ್ಲಿ ಸೆ. 1ರಂದು ಬಹುಮುಖ ಪ್ರತಿಭೆಯ ರಿಶಿತ್ ರಾಜ್ ಅವರಿಗೆ ಗೌರವ ಸನ್ಮಾನ ನಡೆಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಕೆ.ಕಲಾಸಂಸ್ಥೆಗಳ ನಿರ್ದೇಶಕ ಕಲಾವಿದ ರಾಜೇಶ್ ವಿಟ್ಲ ಮತ್ತು ಶಿಕ್ಷಕಿ ಧನಲಕ್ಷ್ಮಿಯವರ ಪುತ್ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ದ 5ನೇ ತರಗತಿ ವಿದ್ಯಾರ್ಥಿ ರಿಶಿತ್ ರಾಜ್ ಚಿತ್ರ ಕಲೆ, ಕ್ಲೇ ಮಾಡೆಲಿಂಗ್, ಕುಣಿತ ಭಜನೆ, ನೃತ್ಯ, ಯಕ್ಷಗಾನ,ಚೆಂಡೆವಾದನ, ಕಿರುಚಿತ್ರ ಗಳಲ್ಲಿ ಅಭಿನಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಝೀಕನ್ನಡ ನಡೆಸಿದ ಡ್ರಾಮಾ ಜೂನಿಯರ್ ಸೀಸನ್ 5ರಲ್ಲಿ ಸ್ಪರ್ಧೆ ಯ ಪೈನಲ್ ಹಂತದವರೆಗೂ ತಲುಪಿದ್ದು ತನ್ನ ಉತ್ತಮ ಪ್ರದರ್ಶನ ದ ಮೂಲಕ ತೀರ್ಪು ಗಾರರ ಮೆಚ್ಚುಗೆ ಪಡೆದಿರುತ್ತಾನೆ. ಇವರನ್ನು ವಿಟ್ಲ ಚಂದಳಿಕೆಯ ನಿವಾಸದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು ಸರ್ಕಾರಿ ಪ್ರೌಢಶಾಲೆ ಕಬಕ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಗಣೇಶ್ ಬಾಗ್ ನ ವಾಸು ನಾಯ್ಕ ಬಾಲಪ್ರತಿಭೆ ಕುರಿತು ಮಾತನಾಡಿ ಶುಭಹಾರೈಸಿದರು.
ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ರಾಜೀವ ಗೌಡ, ಸಮಾಜ ಸೇವಕ, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ನವೀನ್ ಸಿಟಿಗುಡ್ಡೆ ಪುತ್ತೂರು, ರಕ್ತ ಸಂಜೀವಿನಿ ಸದಸ್ಯರಾದ ಮನೋಹರ, ಶಿಕ್ಷಕಿ ಧನಲಕ್ಷ್ಮಿಹಾಗೂ ಕಲಾವಿದ ರಾಜೇಶ್ ವಿಟ್ಲ ಮತ್ತು ಮನೆಯವರು ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.