ಅಲ್ ಅಮೀನ್ ಯೂತ್ ಸೆಂಟರ್ ಮಹಾಸಭೆ…

ಸುಳ್ಯ: ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ (ರಿ) ಇದರ 14 ನೇ ವಾರ್ಷಿಕ ಮಹಾಸಭೆಯು ಆ.30 ರಂದು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಪೈಚಾರಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಕರೀಮ್ ಕೆ.ಎಮ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಸೀದಿ ಖತೀಬರಾದ ಬಹು ಮುನೀರ್ ಸಖಾಫಿಯವರು ನೇರವೆರಿಸಿದರು. ಯೂತ್ ಸೆಂಟರ್ ಸಮಿತಿಯ ಗೌರವಧ್ಯಕ್ಷರಾದ ಬಹು ಇಬ್ರಾಹಿಮ್ ಪೈಝಿಯವರು ಪ್ರಾರ್ಥನೆಗೆ ನೇತೃತ್ವ ವಹಿಸಿದರು.
ಮಿಸ್ಹಾಬ್ ಬೆಟ್ಟಂಪಾಡಿ ಕಿರಾತ್ ಪಠಿಸಿದರು.ಮುಖ್ಯ ಅತಿಥಿಗಳಾಗಿ. ಸಲಾಮ್ ಮುಸ್ಲಿಯಾರ್ ಪೈಚಾರ್. ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ರಾದ ಇಬ್ರಾಹಿಮ್ ಪಿ.ಕೆ.ಹಾಗುಾ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್ ಬಿ. ಉಪಸ್ಥಿತರಿದ್ದರು. ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು. ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕೆ.ಪಿ ಮಂಡಿಸಿದರು.
ನಂತರ 2020 -21 ನೇ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ 2020 – 2021 ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಇಬ್ರಾಹಿಮ್ ಪೈಝಿಯವರು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಕರೀಮ್ ಕೆ.ಎಮ್ ,
ಉಪಾಧ್ಯಕ್ಷರಾಗಿ ಅಶ್ರಫ್ ಪೈಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಸಾಲಿ ಕೆ.ಪಿ, ಕಾರ್ಯದಶಿಗಳಾಗಿ ಸಲಾಮ್ ಪಿ.ಎಸ್ ಹಾಗೂ ಆರ್ಷದ್.ಪ್ರಗತಿ, ಕೋಶಾಧಿಕಾರಿಯಾಗಿ ಮುಜೀಬ್ ಪೈಚಾರ್, ಸದಸ್ಯರುಗಳಾಗಿ ಸತ್ತಾರ್ ಪಿ.ಕೆ, ಹನೀಫ್ ಪಿ.ಕೆ, ಲತೀಫ್ ಪಿ.ಕೆ, ಮನಾಫ್ ಎಚ್ .ಎಸ್, ತಯ್ಯುಬ್ ಎಸ್ ವೈ,ಜುನೈದ್ ಪೈಚಾರ್, ಫಿರ್ದೌಸ್ ಅರ್ತಾಜೆ, ಅಫೀಝ್.ಪಿ ಎ, ಸಾನೀಫ್ ಬೊಳುಬೈಲು, ಸರ್ವಾನ್ ಪೈಚಾರ್, ಪವಾಝ್ ಸೊಣಂಗೇರಿ ಮೊದಲಾದವರನ್ನು ಅಯ್ಕೆ ಮಾಡಲಾಯಿತು.
ಮುಜೀಬ್ ಪೈಚಾರ್ ಸ್ವಾಗತಿಸಿ, ಸತ್ತಾರ್ ಪೈಚಾರ್ ವಂದಿಸಿದರು.

1042c113 1d41 48e0 8815 532dcb1ce59c 225x300

63041396 Ddbb 468a A826 F8013cc74d51 240x300

Cd20a494 A36b 4010 Bda7 464ee9cc3bcc 229x300

Related Articles

Leave a Reply

Your email address will not be published. Required fields are marked *