ಜಲಸಿರಿ ನಿರಂತರ ನೀರು ಸರಬರಾಜು ಯೋಜನೆಯು ಶೀಘ್ರವಾಗಿ ಅನುಷ್ಠಾನಗೊಳ್ಳಲಿ-ಪದ್ಮನಾಭ ನಾಯ್ಕ….
ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ 24/7 ನೀರು ಸರಬರಾಜು ಯೋಜನೆಯು ಆದಷ್ಟು ಬೇಗ ಅನುಷ್ಠಾನಗೊಂಡು ಸಾರ್ವಜನಿಕರಿಗೆ ಪ್ರಯೋಜನವಾಗಲಿ ಎಂದು ನಗರಸಭೆಯ ಸದಸ್ಯ ಪದ್ಮನಾಭ ನಾಯ್ಕ ಆಗ್ರಹಿಸಿದರು.
ಅವರು ಭಾನುವಾರ ನಗರಸಭಾ ವ್ಯಾಪ್ತಿಯ ಪಡೀಲ್ ನಲ್ಲಿರುವ ಟ್ರಿನಿಟಿ ಸಭಾಂಗಣದಲ್ಲಿ 12 ನೇ ವಾರ್ಡಿಗೆ ಸಂಬಂಧಪಟ್ಟಂತೆ ನಡೆದ `24/7 ನೀರಿನ ಜಲಸಿರಿ ಯೋಜನೆ ಸಾರ್ವಜನಿಕ ಸಮಾಲೋಚನಾ ಸಭೆ ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಕೆಯುಐಡಿಎಫ್‍ಸಿ ಕಛೇರಿಯ ಸಾಮಾಜಿಕ ಅಭಿವೃಧ್ದಿ ತಜ್ಞರಾದ ಬಾಲಕೃಷ್ಣ ಅವರು ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಯೋಜನೆಯ ಪುತ್ತೂರು ಕಛೇರಿಯಿಂದ ಸಹಾಯಕ ಅಭಿಯಂತರರಾದ ಶಮಂತ್ ಕುಮಾರ್ ಹಾಗೂ ವಿಜಯನಂದ ಎಂ ಸೊಲಾಪುರ್, ಸಮಾಲೋಚನಾ ಅಭಿಯಂತರರಾದ ಸಂದೇಶ್ ಅಳಪೆ ಹಾಗೂ ಮಂಗಳೂರು ಕಛೇರಿಯ ವಿನಾಯಕ್, ಸಂಜೀವ ಸುವರ್ಣ ಹಾಗೂ ಪ್ರಕಾಶ್, ಗುತ್ತಿಗೆದಾರ ಸುಹೆಜ್ ಕಂಪೆನಿಯ ಸಂತೋಷ್ ಉಪಸ್ಥಿತರಿದ್ದರು.
ಇಜೀಸ್ ಸಂಸ್ಥೆಯ ಸಾಮಾಜಿಕ ಅಭಿವೃದ್ದಿ ಅಧಿಕಾರಿ ಎಂ ಜೆ ದೇವೂರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ಹಾಜರಿದ್ದ ಸ್ಥಳೀಯ ಸಾರ್ವಜನಿಕರಾದ ಗೋಪಾಲಕೃಷ್ಣ ಭಟ್, ಶಂಕರನಾರಾಯಣ ಭಟ್, ಎ.ಕೆ ಗೌಡ, ಡಾ| ಮಹಾಲಿಂಗೇಶ್ವರ ಪ್ರಸಾದ್, ಅಬ್ದುಲ್ ಗಪೂರ್ ಹಾಗೂ ಕನಕದಾಸ ಕಾಲೋನಿಯ ರಮೇಶ್ ಮತ್ತಿತರರು ಅನಿಸಿಕೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಜನೆಯ ಸಾಮಾಜಿಕ ಅಭಿವೃದ್ದಿ ಸಹಾಯಕರಾದ ಉಸ್ಮಾನ್ ಸ್ವಾಗತಿಸಿ ವಂದಿಸಿದರು. ಕಛೇರಿಯ ಚರಣ್ ಸಹಕರಿಸಿದರು.