ಮುಸ್ಲಿಂ ಸಮುದಾಯದ 4% ಮೀಸಲಾತಿ ರದ್ದು – ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಆಕ್ರೋಶ…

ಸುಳ್ಯ: ರಾಜ್ಯ ಸರಕಾರ ಮುಸ್ಲಿಂ ಸಮುದಾಯದ 4% ಮೀಸಲಾತಿ ರದ್ದು ಮಾಡಿ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿ ಮುಸ್ಲಿಂ ಸಮುದಾಯಕ್ಕೆ ಗದಪ್ರಹಾರ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರ ವಿರೋಧಿ ಸರಕಾರ ಮತ್ತೊಮ್ಮೆ ಅಲ್ಪಸಂಖ್ಯಾತರ ಸರಕಾರಿ ಹಾಗೂ ರಾಜಕೀಯ ಮೀಸಲಾತಿಯನ್ನು ರದ್ದುಗೊಳಿಸಿ ಬ್ರಾಹ್ಮಣ, ಜೈನ, ಆರ್ಯವೈಷ್ಯ,ನಾಗರತ, ಮೊದಲಿಯಾರ್ ಸಮುದಾಯದ ಜೊತೆ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿಸಿ 10% ಮೀಸಲಾತಿ ನೀಡಿ ಸರಕಾರ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಮೋಟಕುಗೊಳಿಸಿದೆ. ಮುಸ್ಲಿಂ ಸಮುದಾಯದ ಮೇಲೆ ಸರಕಾರ ಗದ ಪ್ರಹಾರ ಮಾಡಿದೆ. ಚುನಾವಣಾ ದೃಷ್ಟಿಯಿಂದ ಇದು ಭಾವನೆಯನ್ನು ಕೆರಳಿಸಿ ಮತ ಪರಿವರ್ತನೆ ಮಾಡಲು ಉರಿಗೌಡ ನಂಜೇ ಗೌಡ ಮಾದರಿಯ ತಂತ್ರವೇ ಆಗಿದೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಲು ಸರಕಾರ ಹುಚ್ಚು ಧೈರ್ಯವನ್ನು ತೋರಿದ್ದು, ಇದರಿಂದ ಸರಕಾರ ದೊಡ್ಡ ನಷ್ಟವನ್ನು ಅನುಭವಿಸುವ ದಿನ ಸಮೀಪ ಇದೆ ಎಂದು ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸರಕಾರದ ನಿಲುವನ್ನು ಖಂಡಿಸಿದ್ದಾರೆ. ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಹಾಗೂ ಹೋರಾಟದ ಕೊರತೆ ಇಂದು ಸಮುದಾಯಕ್ಕೆ ಈ ಪರಿಸ್ಥಿತಿಗೆ ಬರಲು ಕಾರಣ. ಎಲ್ಲಾ ಪಕ್ಷದ ಮುಸ್ಲಿಂ ನಾಯಕರು, ಧಾರ್ಮಿಕ ಮುಖಂಡರು, ಉಲೇಮಾಗಳು ಈ ಬಗ್ಗೆ ಒಟ್ಟಾಗಿ ಹೋರಾಟ ಮಾಡಲು ಸಜ್ಜಾಗುವಂತೆ ಟಿ ಎಂ ಶಾಹಿದ್ ತೆಕ್ಕಿಲ್ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ.

Sponsors

Related Articles

Back to top button