ಗಾಂಧಿ ಪುರಸ್ಕಾರಕ್ಕೆ ಆಹ್ವಾನಿಸಿ ಪ್ರಶಸ್ತಿ ನೀಡದೆ ಅವಮಾನ – ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಖಂಡನೆ…

ಬೆಂಗಳೂರು: 2019 ರಿಂದ 2022 ರವರಗಿನ ಮೂರು ವರ್ಷಗಳ ರಾಜ್ಯದ 700 ಗಾಂಧಿ ಪುರಸ್ಕ್ರತ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು, ಉಪಾಧ್ಯಾಕ್ಷರನ್ನು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ ಕರೆಸಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ನಂಬಿಸಿ ರಾಜ್ಯದ ಐದು ಸಾವಿರ ಜನ ಪ್ರತಿನಿಧಿಗಳನ್ನು ಕರೆಸಿ ಕೇವಲ 200 ಪಂಚಾಯತ್ ಗೆ ಪ್ರಶಸ್ತಿ ಪ್ರದಾನ ಮಾಡಿ ಉಳಿದವರಿಗೆ ಪ್ರಶಸ್ತಿ ಮತ್ತು ಪ್ರಶಸ್ತಿಪತ್ರ ನೀಡದೆ ಪುಕ್ಕಟೆ ಪ್ರಚಾರಕ್ಕೆ ಮತ್ತು ಚುನಾವಣೆಯ ಉದ್ದೇಶಕ್ಕೆ ಅವ್ಯವಸ್ಥೆಯ ಕಾರ್ಯಕ್ರಮ ಸಂಘಟಸಿ ಉಳಿದ ಗ್ರಾಮ ಪಂಚಾಯತ್ ಗಳಿಗೆ ಅವಮಾನಿಸಿರುವುದು ಸರಕಾರ ಗಾಂಧಿಜಿಯವರಿಗೆ ಮತ್ತು ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯತ್ ಗಳಿಗೆ ಮಾಡಿದ ಅವಮಾನ. ಈ ಕಾರ್ಯಕ್ರಮವನ್ನು ಸಂಘಟಿಸಿ ಮುಜುಗರಕ್ಕೊಳಗಾದ ಸರಕಾರ ರಾಜ್ಯದ ಜನತೆಯ ಕ್ಷಮೆ ಕೇಳುವಂತೆ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಸರಕಾರ ಚುನಾವಣಾ ತರಾತುರಿಯಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿ ಮುಖ್ಯಮಂತ್ರಿ, ಕೇಂದ್ರ ಸಚಿವರನ್ನು ಆಹ್ವಾನಿಸಿ ಮುಜುಗರಕ್ಕೆ ಒಳಗಾಗಿದೆ.ಇದರಿಂದಾಗಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸರಕಾರವನ್ನು ಪ್ರಶ್ನಿಸಿದ್ದಾರೆ.

whatsapp image 2023 03 24 at 9.12.51 pm
ಟಿ.ಎಂ ಶಹೀದ್ ತೆಕ್ಕಿಲ್
Sponsors

Related Articles

Back to top button