ಸರಕಾರಿ ಪ. ಪೂ. ಕಾಲೇಜು ಸಜೀಪಮೂಡ-ಪ್ರಯೋಗಾಲಯದ ಉದ್ಘಾಟನೆ…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ವಿದ್ಯಾ ಸಂಸ್ಥೆಗೆ ಸರಕಾರದ ಇಲಾಖೆಯ ಯಾವುದೇ ಅನುದಾನ ಇಲ್ಲದೆ ಕಾಲೇಜಿನ ಪ್ರಾಚಾರ್ಯ ಸುರೇಶ್ ಐತಾಳ ಪ್ರಯತ್ನದಿಂದ ಅಂದಾಜು ರೂಪಾಯಿ ಎರಡು ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಪ್ರಯೋಗಾಲಯ ನಿರ್ಮಾಣಗೊಂಡಿದ್ದು, ಪ್ರಯೋಗಾಲಯದ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ ನೆರವೇರಿಸಿದರು.
ಸುಜಿೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು. ಪ್ರಾಚಾರ್ಯರಾದ ಸುರೇಶ್ ಐತಾಳ್, ಉಪನ್ಯಾಸಕರಾದ ಬಾಲಕೃಷ್ಣ ಎನ್. ವಿ, ಸುಂದರಿ, ಭಾರತೀ, ಶೋಭಾ, ಗಾಯತ್ರಿ, ಯಶೋಧ, ಸಿಂಧೂಜ ಮೊದಲಾದವರು ಉಪಸ್ಥಿತರಿದ್ದರು.