ಸ್ವಾಗತ ಮಹಾದ್ವಾರ ಲೋಕಾರ್ಪಣೆ…
ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ಮಾಣಿ- ಉಳ್ಳಾಲ ರಾಜ್ಯ ಹೆದ್ದಾರಿ ಸಜೀಪ ಮೂಡ ಗ್ರಾಮದ ಕಂದೂರು ಎಂಬಲ್ಲಿ ನೂತನವಾಗಿ ಅಂದಾಜು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸ್ವಾಗತ ಮಹಾದ್ವಾರ ಡಿ.4 ರಂದು ಬ್ರಹ್ಮಶ್ರೀ ನೀಲೆಶ್ವರ ಕೆ ಉಚ್ಚಿಲತ್ತಾಯ, ಪದ್ಮನಾಭ ತಂತ್ರಿಗಳು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ವಹಿಸಿದ್ದರು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮೆಸ್ಕಾಂ ಬಂಟ್ವಾಳ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಭಟ್, ಸ್ಕಾಡ್ಸ್ ಅಧ್ಯಕ್ಷ ಕೆ ರವೀಂದ್ರ ಕಂಬಳಿ, ಶಿವರಾಮ ಮಯ್ಯ, ಮಹಾಬಲ ಕೊಟ್ಟಾರಿ, ಸುಧಾಕರ ಆಚಾರ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಜಯಶಂಕರ ಬಾಸ್ರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.