ಬಂಟ್ವಾಳ ಪುರಸಭೆ – ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ…

ಬಂಟ್ವಾಳ: ಬಂಟ್ವಾಳ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಾಸು ಪೂಜಾರಿ, ಉಪಾಧ್ಯಕ್ಷರಾಗಿ ಎಸ್ಡಿಪಿಐ ಪಕ್ಷದ ಮೋನಿಸ್ ಆಲಿ ಆಯ್ಕೆಯಾಗಿದ್ದಾರೆ.ಇವರು ಕಾಂಗ್ರೆಸ್, ಎಸ್ಡಿಪಿಐ ಪಕ್ಷ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಭಂಡಾರಿಬೆಟ್ಟು ನಾಮಪತ್ರ ಸಲ್ಲಿಸಿದ್ದರು.
ಮೈತ್ರಿ ಕೂಟಕ್ಕೆ15 ಮತಗಳು, ಬಿಜೆಪಿಗೆ ಶಾಸಕ, ಸಂಸದ ಮತ ಸೇರಿ 13 ಮತಗಳು ಲಭಿಸಿದವು.
ನೂತನ ಅಧ್ಯಕ್ಷರು ಮಾತನಾಡಿ ಮೂಲಭೂತ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತವನ್ನು ನಡೆಸುವುದಾಗಿ ತಿಳಿಸಿದರು.