ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಮತೀಯ ಪಕ್ಷದೊಂದಿಗೆ ಹೊಂದಾಣಿಕೆ: ಶಾಸಕ ರಾಜೇಶ್ ನಾಯ್ಕ್…

ಬಂಟ್ವಾಳ: ಕಾಂಗ್ರೆಸ್ ಮತ್ತು ಎಸ್.ಡಿ. ಪಿ. ಐ ಪಕ್ಷ ಹೊಂದಾಣಿಕೆಯಿಂದ ಪುರಸಭೆಯ ಅಧಿಕಾರ ಪಡೆದುಕೊಂಡಿದೆ, ಇದರಿಂದ ಜನತೆಗೆ ಸ್ಪಷ್ಟವಾದ ಸಂದೇಶ ರವಾನೆ ಆಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಅವರು ಪುರಸಭೆಯ ಚುನಾವಣೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮವರಿಗೆ ಮಾಹಿತಿ ನೀಡಿದ ಅವರು ಎಸ್.ಡಿ.ಪಿ.ಐ.ನ್ನು ಯಾವ ಪಕ್ಷದ ಬಿ ಟೀಮ್ ಎಂಬುದು ಜನತೆಗೆ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ 13 ಮತಗಳನ್ನು ಅತ್ಯಂತ ಹೆಚ್ಚು ಮತಗಳನ್ನು ಪಡೆದರು ಕೂಡ ಕಾಂಗ್ರೆಸ್ ಮತ್ತು ಎಸ್ ಡಿಪಿ ಐ ಪಕ್ಷದ ಹೊಂದಾಣಿಕೆಯಿಂದ ಅಧಿಕಾರ ಪಡೆದುಕೊಂಡಿದ್ದಾರೆ.
ಎಸ್.ಡಿ.ಪಿ.ಐ ಯಾವ ಪಕ್ಷದ ಬಿ ಟೀಮ್ ಎಂಬುದು ಸ್ಪಷ್ಟವಾಗಿದೆ. ಇದರಿಂದ ಬಂಟ್ವಾಳದ ಜನತೆಗೆ ಒಂದು ಸಂದೇಶ ರವಾನೆ ಆಗಿದೆ. ಬಹಳಷ್ಟು ಸಮಯದಿಂದ ನಾವು ಮತೀಯವಾದಿಗಳೊಂದಿಗೆ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಒಳಗಿಂದ ಒಳಗೆ ಒಪ್ಪಂದ ಮಾಡಿಕೊಂಡೇ ಬರುತ್ತಿತ್ತು ಎಂದು ಅರೋಪ ಮಾಡಿದ್ದಾರೆ.