ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಕೊಡಂಗೆ – “ಸ್ಮಾರ್ಟ್ ಕಂಪ್ಯೂಟರ್ ಕ್ಲಾಸ್” ಉದ್ಘಾಟನೆ…

ಬಂಟ್ವಾಳ: ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಕೊಡಂಗೆ ಬಂಟ್ವಾಳ ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೋಟರಿ ಕ್ಲಬ್ ಮೊಡಂಕಾಪು ಸಹಕಾರದೊಂದಿಗೆ ಅನಿವಾಸಿ ಉದ್ಯಮಿಯೊಬ್ಬರು ಕೊಡಮಾಡಿದ “ಸ್ಮಾರ್ಟ್ ಕಂಪ್ಯೂಟರ್ ಕ್ಲಾಸ್” ಉದ್ಘಾಟನೆ ಸಮಾರಂಭ ಇತ್ತೀಚೆಗೆ ಕೊಡಂಗೆ ಶಾಲೆಯಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಗಣ್ಯರ ಸಮ್ಮುಖದಲ್ಲಿ ಶಿಕ್ಷಣ ಸಂಯೋಜಕರಾದ ಸುಜಾತಾ ಕುಮಾರಿ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮೊಡಂಕಾಪು ಇದರ ಅಧ್ಯಕ್ಷರಾದ ಪಿ ಎ ರಹೀಂ ಅವರು ವಹಿಸಿದ್ದರು.. ವೇದಿಕೆಯಲ್ಲಿ ರೋಟರಿ ಕ್ಲಬ್ ಮೊಡಂಕಾಪು ಇದರ ಪ್ರಧಾನ ಕಾರ್ಯದರ್ಶಿ ಅಲೆಕ್ಸಾಂಡರ್ ಲೋಬೋ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹುಸೈನ್, ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಚಾಲಕ ರಾದ ಅಮಾನುಲ್ಲಾ ಖಾನ್ , ಶಾಲೆಯ ಮುಖ್ಯ ಶಿಕ್ಷಕ ರಾದ ಸುಧೀರ್ ಜಿ ,ಸಿಆರ್ ಪಿ ಪ್ರೇಮಲತಾ, ಬಿಆರ್ ಸಿ ನಾಗರತ್ನ, ಎಸ್ಡಿಎಂಸಿ ಸದಸ್ಯ ರಾದ ಇಸ್ಮಾಯಿಲ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಸುಗುಣ, ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆಯನ್ನು ಶಾಹಿರ್,ಇಝಾನ್, ಶಾಕಿಬ್ ನೆರವೇರಿಸಿದರು. ಸುಧೀರ್ ಜಿ ಅವರು ಸರ್ವರನ್ನೂ ಸ್ವಾಗತಿಸಿದರು. ನಿವೇದಿತ ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗೀತಾ ಕುಮಾರಿ ನಿರ್ವಹಿಸಿದರು.

Sponsors

Related Articles

Back to top button