ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ 2022 – ನಿತಿನ್ ರೈ ಕುಕ್ಕುವಳ್ಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ…

ಮಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ 2022 ರಲ್ಲಿ ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಇವರು ನಿರ್ದೇಶಿಸಿದ “ಧರ್ಮದೈವ 2” ತುಳು ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಸಿಕ್ಕಿರುತ್ತದೆ.
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಸ್ವೀಕರಿಸಿದರು. “ಧರ್ಮ ದೈವ 2″ಕಿರು ಚಿತ್ರ ನಿರ್ಮಾಪಕರಿಗೆ,ನಿರ್ದೇಶಕರಿಗೆ,ತಂತ್ರಜ್ಞರಿಗೆ,ಕಲಾವಿದರಿಗೆ ಬಳಗ ಅಭಿನಂದನೆ ಸಲ್ಲಿಸಿದ್ದಾರೆ. ಇದು ತುಳು ನಾಡು ನುಡಿ ಸಂಸ್ಕೃತಿ ಆರಾಧನೆಗೆ ಸಂದ ದೊಡ್ಡ ಗೌರವವಾಗಿದೆ.
ಇವರೇ ನಿರ್ದೇಶಿಸಿದ “ಆಕೆ ಮೋಹಿನಿ”ಕನ್ನಡ ಕಿರುಚಿತ್ರಕ್ಕೆ BEST HORROR ಪ್ರಶಸ್ತಿಯೂ ಸಂದಿರುತ್ತದೆ.2022ರಲ್ಲಿ “ಧರ್ಮದೈವ 1,”ಧರ್ಮದೈವ 2″ಮತ್ತು “ಆಕೆ ಮೋಹಿನಿ” ಈ ಮೂರು ಕಿರುಚಿತ್ರಗಳಿಗೆ ನಿರ್ದೇಶನ ನೀಡಿದ ಹಿರಿಮೆ ನಿತಿನ್ ರೈ ಕುಕ್ಕುವಳ್ಳಿ ಹಾಗೂ ಚಿತ್ರ ತಂಡಗಳ ನಿರ್ಮಾಪಕರಿಗೆ, ಕಲಾವಿದರಿಗೆ ,ತಂತ್ರಜ್ಞರಿಗೆ ಸಲ್ಲುತ್ತದೆ.