ಎಸ್. ಜೆ. ಎಂ. ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಪ್ರಥಮ ಸ್ಥಾನ ಪಡೆದ ತಮೀಮ್ ಸುಳ್ಯ ರವರಿಗೆ ಟಿ. ಬಿ. ಕುಟುಂಬದಿಂದ ಸನ್ಮಾನ…

ಸುಳ್ಯ: ಎಸ್. ಜೆ. ಎಂ. ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಮಲಯಾಳಂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಮೀಮ್ ಸುಳ್ಯ ರವರಿಗೆ ಟಿ.ಬಿ. ಕುಟುಂಬದಿಂದ ದೊಡ್ಡಡ್ಕ ನಿವಾಸದಲ್ಲಿ ಸನ್ಮಾನ ಮಾಡಲಾಯಿತು ಮತ್ತು ಉಡುಗೊರೆಯಾಗಿ ಸೈಕಲ್ ನೀಡಲಾಯಿತು.
ಕುಟುಂಬ ಸದಸ್ಯರಾದ ಟಿ. ಬಿ. ಅಬ್ದುಲ್ಲಾ, ಡಿ. ಎಂ. ಮುಹಮ್ಮದ್ ದರ್ಖಾಸ್, ಅಬ್ದುರ್ರಹ್ಮಾನ್ ದೊಡ್ಡಡ್ಕ, ಝುಬೈರ್ ಸುಳ್ಯ, ಹನೀಫ್ ಟಿ. ಬಿ., ಮುನೀರ್ ದಾರಿಮಿ, ರಈಸ್ ದೊಡ್ಡಡ್ಕ, ಸ್ವಾದಿಕ್ ಕಲ್ಲುಗುಂಡಿ, ಸಲೀಕ್ ಕಲ್ಲುಗುಂಡಿ ಮತ್ತಿತರು ಉಪಸ್ಥಿತರಿದ್ದರು.