ಗಿರಿಜಾ ಶಂಕರ ತುದಿಯಡ್ಕ ವಿಧಿವಶ…
ಸುಳ್ಯ: ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ. ತುದಿಯಡ್ಕ ವಿಷ್ಣುಯ್ಯ ರವರ ಪುತ್ರ ರೊ.ಗಿರಿಜಾ ಶಂಕರ ತುದಿಯಡ್ಕ(63) ರವರು ತೀವ್ರತರದ ಮಿದುಳಿನ ರಕ್ತಸ್ರಾವಕ್ಕೊಳಪಟ್ಟು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಡಿ. 30 ರಂದು ನಿಧನರಾದರು.
ಡಿ.29 ರಂದು ಸಂಜೆ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು.ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಕಾರಣದಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಶ್ರೀಮತಿ ಜಯಶ್ರೀ, ಇಬ್ಬರು ಪುತ್ರರಾದ ಸುಬ್ರಹ್ಮಣ್ಯ, ವಿಷ್ಣು ಪ್ರಕಾಶ್ ಮತ್ತು ಓರ್ವ ಪುತ್ರಿ ಶ್ರೀಮತಿ ಸುಶ್ಮಿತಾ ಹಾಗೂ ಸಹೋದರರಾದ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ಸಹೋದರಿ ಶ್ರೀಮತಿ ಶೈಲಜಾ, ಶ್ರೀಮತಿ ಪದ್ಮಜಾ ಹಾಗೂ ಸೊಸೆ ಮತ್ತು ಅಳಿಯ ಹಾಗೂ ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.