ಮೀಫ್ ಶಿಕ್ಷಣ ಸಂಸ್ಥೆ ಗಳ ಒಕ್ಕೂಟದ ವತಿಯಿಂದ ಡಾ. ಕೆ. ವಿ. ರೇಣುಕಾ ಪ್ರಸಾದ್ ರವರಿಗೆ ಅಭಿನಂದನೆ…
ಕೆವಿಜಿ ಯವರೊಂದಿಗೆ ನಿಕಟ ಭಾಂದವ್ಯ ವನ್ನು ಹೊಂದಿದ್ದ ಮಾಜಿ ಶಿಕ್ಷಣ ಸಚಿವ ಬಿ.ಎ. ಮೊಯಿದಿನ್ ರವರ ಕೊಡುಗೆಯನ್ನು ಸ್ಮರಿಸಿದ ಆರ್. ಪಿ...
ಸುಳ್ಯ: ಮಾಜಿ ಶಿಕ್ಷಣ ಸಚಿವರಾದ ಬಿ. ಎ. ಮೊಯಿದಿನ್ ರವರು ಸ್ಥಾಪಿಸಿದ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್ ) ವತಿಯಿಂದ 2 ನೇ ಬಾರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಳ್ಯದ ಡಾ ಕೆ. ವಿ. ರೇಣುಕಾ ಪ್ರಸಾದ್ ರವರನ್ನು ಅಭಿನಂದಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಮೀಫ್ ಅವಿಭಜಿತ ದ. ಕ. ಜಿಲ್ಲೆಯಲ್ಲಿ 180 ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ವಾಗಿದ್ದು ಇಲ್ಲಿನ ವಿದ್ಯಾರ್ಥಿ ಗಳ ಉನ್ನತ ವ್ಯಾಸಂಗಕ್ಕೆ ಕೆವಿಜಿ ಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಹಕಾರ ನಿಜಕ್ಕೂ ಅಭಿನಂದನೀಯ ಎಂದರು
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್,ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿಇಒ ಉಜ್ವಲ್ ಊರುಬೈಲು, ಪ್ರಾoಶುಪಾಲ ಪ್ರೊ. ಸುರೇಶ ವಿ, ಭವಾನಿ ಶಂಕರ್, ದಿನೇಶ್ ಮಡ್ತಿಲ,ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಬಿ. ಟಿ. ಮಾಧವ,ಶಾಫಿ ಕುತ್ತಮೊಟ್ಟೆ, ಪ್ರಸನ್ನ ಕಲ್ಲಾಜೆ, ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.