ಕಲ್ಲಿಕೋಟೆ ಖಾಜಿ ಪ್ರತಿಷ್ಠಾನದ 16ನೇ ಪ್ರಶಸ್ತಿ- ಏನೆಪೋಯ ಅಬ್ದುಲ್ಲಾ ಕುಂಞಿ ಅವರಿಗೆ ವಿತರಣೆ…

ಕಲ್ಲಿಕೋಟೆ:ಕಲ್ಲಿಕೋಟೆ ಖಾಜಿಯಾಗಿದ್ದ ದಿವಂಗತ ನಾಲಗತ್ ಮುಹಮದ್ ಕೋಯ ಅವರ ಸ್ಮರಣಾರ್ತ ಖಾಜಿ ಪ್ರತಿಷ್ಠಾನದ 16ನೇ ವರ್ಷದ ಪ್ರಶಸ್ತಿಯನ್ನು ಕೇರಳ ಸ್ಪೀಕರ್ ಎ ಎನ್ ಶಂಸೀರ್ ಏನೆಪೋಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಏನೆಪೋಯ ಅಬ್ದುಲ್ಲಾ ಕುಂಞಿ ಅವರಿಗೆ ಹೋಟೆಲ್ ಟ್ರೈಪೇಂಟದಲ್ಲಿ ಹಸ್ತಾಂತರಿಸಿದರು.
ನಂತರ ಮಾತನಾಡಿದ ಶಂಸೀರ್ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಸಂವಿಧಾನವನ್ನು ತಿರುಚುವ ಕೆಲಸ ಕೆಲವು ದುಷ್ಟ ಶಕ್ತಿಗಳಿಂದ ಆಗುತ್ತಿದ್ದು ಮಸೀದಿಗಳ ತಳಸ್ತಾನವನ್ನು ಕೆಲವರು ಹುಡುಕುತ್ತಿದ್ದು ಇದು ಜಾತ್ಯತೀತ ದೇಶದ ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಹೇಳಿ ಏನೆಪೋಯ ಸಂಸ್ಥೆ ಜಾತ್ಯತೀತ ಸಂಸ್ಥೆ ಎಂದು ಅಬ್ದುಲ್ಲಾ ಕುಂಞಿ ಅವರನ್ನು ಅಭಿನಂದಿಸಿದರು.
ಖಾಜಿ ಫೌಂಡೇಶನ್ ಅಧ್ಯಕ್ಷರಾದ ಖ್ಯಾತ ಹೃದ್ರೂಗ ತಜ್ಞ ಡಾಕ್ಟರ್ ಕುಂಞಲಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭಿನಂದನಾ ಭಾಷಣ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಖಾಜಿ ಪ್ರತಿಷ್ಠಾನದ ಚಟುವಟಿಕೆಗಳ ನೇತೃತ್ವ ವಹಿಸಿದ ಡಾಕ್ಟರ್ ಕುಂಞಲಿ ಅವರು ಕರ್ನಾಟಕ ರಾಜ್ಯದ ಗಡಿ ಭಾಗವದ ಉಪ್ಪಳ ಬಳ್ಳೂರಿನಿಂದ 57 ವರ್ಷಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆದು ಕಲ್ಲಿಕೋಟೆ ಮಹಾನಗರದಲ್ಲಿ ಕಳೆದ 52 ವರ್ಷಗಳಿಂದ ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಇಂದು 16 ನೇ ವರ್ಷದ ಪ್ರಶಸ್ತಿಗೆ ಆಯ್ಕೆಯಾದ ಏನೆಪೋಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಏನೆಪೋಯ ಅಬ್ದುಲ್ಲಾ ಕುಂಞಿ ಅವರು ಕೂಡ ಕರ್ನಾಟಕದಲ್ಲಿ ಮತ್ತು ಕೇರಳದ ಹಲವಾರು ಬಡ ಮಕ್ಕಳನ್ನು ತಮ್ಮ ವಿಶ್ವ ವಿದ್ಯಾಲಯದಲ್ಲಿ ಉಚಿತವಾಗಿ ಪ್ರವೇಶ ನೀಡಿ ವೈದ್ಯರನ್ನಾಗಿ, ಪದವೀಧರರನ್ನಾಗಿ ಮಾಡಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತ ವ್ಯಕ್ತಿಗೆ ಇಂದು ಖಾಜಿ ನಾಲಕತ್ ಮುಹಮ್ಮದ್ ಕೋಯ ಅವರ ಪ್ರಶಸ್ತಿ ನೀಡಿರುವುದು ಖಾಜಿ ಅವರ ಉದ್ದೇಶಕ್ಕೆ ಪೂರಕವಾಗಿದೆ. ಖಾಜಿ ಅವರ ಅಭಿಲಾಷೆ ಕೂಡ ಅದೇ ಆಗಿತ್ತು ಎಂದು ಖಾಜಿ ಅವರನ್ನು ಸ್ಮರಿಸಿ ಅಭಿನಂದನಾ ಭಾಷಣ ಮಾಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಏನೆಪೋಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಏನೆಪೋಯ ಅಬ್ದುಲ್ಲಾ ಕುಂಞಿ ಅವರು ತಂದೆ ದಿವಂಗತ ಏನೆಪೋಯ ಮೊಯಿದೀನ್ ಕುಂಞಿ ಅವರೇ ನನಗೆ ಸ್ಫೂರ್ತಿ. ಅವರ ಸಲಹೆಯತೆ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸಿದ್ದೇನೆ. ಖಾಜಿ ಪ್ರತಿಷ್ಠಾನದ ಕೆಲಸ ಮತ್ತು ಬಡವರ ಬಗ್ಗೆ ಇರುವ ಬದ್ಧತೆಯನ್ನು ಅಭಿನಂದಿಸಿದರು.
ಬಡವರಿಗೆ ವಾಸದ ಮನೆ ಪದ್ದತಿಯನ್ನು ಮೇಯರ್ ಬೀನ ಫಿಲಿಪ್ ನೆರೆವೆರಿಸಿದರು. ಎಜುಲಿಫ್ಟ್ ಕಾರ್ಯಕ್ರಮವನ್ನು ಮಾಜಿ ಸಚಿವ ಶಾಸಕ ಅಹಮದ್ ದೇವರಕೊವಿಲ್ ನೆರೆವೇರಿಸಿದರು. ಖಾಜಿ ನಾಲಗತ್ ಮಹಮದ್ ಕೋಯ ಅವರ ಅನುಸ್ಮರಣೆಯನ್ನು ಸಂಸತ್ ಸದಸ್ಯ ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವ ಈ ಟಿ ಮುಹಮ್ಮದ್ ಬಶೀರ್ ನೆರೆವೇರಿಸಿದರು. ಶ್ರೀಮತಿ ಲುಲುಲ್ ಮಾರ್ಜನ್ ಪರ್ವೀಸ್, ಸಿ ಎ ಉಮ್ಮರ್ ಕೋಯ, ಕೆ ಎಂ ಬಶೀರ್ ಅವರು ವಾಸದ ಮನೆಗೆ ತಲಾ 5 ಲಕ್ಷ ಮೊತ್ತದ ಚೆಕ್ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ಉಪ ಮೆಯರ್ ಮುಝಫಿರ್ ಅಹಮದ್, ನ್ಯಾಷನಲ್ ಹಾಸ್ಪಿಟಲ್ ಛೇರ್ಮನ್ ಡಾಕ್ಟರ್ ಕೆ ಮೊಯಿದು, ಖ್ಯಾತ ಉಕ್ಕಿನ ಉದ್ಯಮಿ ಪಿ ಕೆ ಅಹಮದ್, ಮಲಬಾರ್ ಗೋಲ್ಡ್ ಅಧ್ಯಕ್ಷ ಪಿ ಕೆ ಅಹಮದ್, ಪಾಳಯಂ ಇಮಾಮ್ ಹುಸೈನ್ ಮಾಡವೂರ್, ಉದ್ಯಮಿ ಎಂ ವಿ ಮುಹಮದ್ ಅಲಿ ಅತಿಥಿಗಳಾಗಿ ಆಗಮಿಸಿದರು. ಎಂ ವಿ ರಂಸಿ ಸ್ವಾಗತಿಸಿ, ಕೆ ಇಸ್ಮಾಯಿಲ್ ವಂದಿಸಿದರು.

whatsapp image 2024 12 23 at 12.25.00 pm

whatsapp image 2024 12 23 at 12.40.12 pm

whatsapp image 2024 12 23 at 12.40.14 pm

whatsapp image 2024 12 23 at 1.07.27 pm

Sponsors

Related Articles

Back to top button