ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ 2023-24…

ಬಂಟ್ವಾಳ: ಪ್ರತಿ ಮಗುವಿನಲ್ಲೂ ಒಂದು ಪ್ರತಿಭೆ ಇದ್ದೆ ಇರುತ್ತೆ, ಅದನ್ನು ಹೊರಹಕಾಲು ಪ್ರತಿಭಾ ಕಾರಂಜಿ ಸಹಕರಿಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ 2023-2024 ಕಾರ್ಯಕ್ರಮವನ್ನು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿ ಉದ್ಘಾಟಿಸಿ ಮಾತಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಣ್ಣು ಪೂಜಾರಿ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಂಜುನಾಥನ್ ಎಂ ಜಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂಟ್ವಾಳ, ಡಾಕ್ಟರ್ ಕಮಲ ಪ್ರಭಾಕರ್ ಭಟ್,ರಮೇಶ್ ಎನ್ ಸಂಚಾಲಕರು ಶ್ರೀರಾಮ ವಿದ್ಯಾ ಕೇಂದ್ರ, ಶಾಂಭವಿ ಆಡಳಿತ ಅಧಿಕಾರಿ ಶ್ರೀರಾಮ ವಿದ್ಯಾಕೇಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಲ್, ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕರಾದ ಪ್ರತಿಮ, ಮಾಣಿ ಕ್ಲಸ್ಟರ್ ಸಿ ಆರ್ ಪಿ ಸತೀಶ್ ರಾವ್, ಕೆದಿಲ ಕ್ಲಸ್ಟರ್ ಸಿ ಆರ್ ಪಿ ಸುಧಾಕರ್, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ಉಪಸ್ಥಿತರಿದ್ದರು.

ಶ್ರೀ ರಾಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗೋಪಾಲಸ್ವಾಗತಿಸಿ,ಶಿಷ್ಯಕಿ ಸೌಮ್ಯ ಪಿ ವಂದಿಸಿದರು.ಶಿಕ್ಷಕಿ ಸುಮಿತ್ರ ಕಾರ್ಯಕ್ರಮ ನೀರೂಪಿಸಿದರು. ಕಲ್ಲಡ್ಕ ವಲಯದ 5 ಕ್ಲಸ್ಟರಿನ 27 ಶಾಲೆಗಳ 331 ಸ್ಪರ್ಧಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

whatsapp image 2023 09 02 at 11.31.53 am
Sponsors

Related Articles

Back to top button