ಬಿ ಸಿ ರೋಡು – ಕೋಟಿ ಗೀತಾ ಲೇಖನ ಯಜ್ಞ ಪ್ರಚಾರ ಕಾರ್ಯ ನಿಮಿತ್ತ ಸಮಿತಿ ರಚನೆ…

ಬಂಟ್ವಾಳ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ದಿವ್ಯ ಸಂಕಲ್ಪದಂತೆ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರ ಕಾರ್ಯ ನಿಮಿತ್ತ ಸಮಿತಿಯನ್ನು ಬಿ.ಸಿ.ರೋಡಿನ ಬ್ರಾಹ್ಮಣ ಪರಿಷತ್ತ್ ಕಟ್ಟಡದಲ್ಲಿ ಹಿರಿಯ ನ್ಯಾಯವಾದಿ ರಮೇಶ್ ಉಪಾಧ್ಯಾಯ ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಭಗವದ್ಗೀತೆ ಪ್ರತಿಯೊಬ್ಬರ ಮನೆಯಲ್ಲಿ ನಿತ್ಯ ಪಠಣವಾಗಬೇಕು, ಬದುಕಿನ ಅನೇಕ ಸಂಕಷ್ಟಗಳಿಗೆ ಗೀತೆಯಲ್ಲಿ ಉತ್ತರವಿದೆ ಎಂದರು.
ಉಡುಪಿ ಮಠದ ವತಿಯಿಂದ ಗೀತಾ ಲೇಖನ ಯಜ್ಞ ಪ್ರಚಾರಕರಾದ ಕೆ. ವಿ. ರಮಣ್ ಮಾತನಾಡಿ ಅಮೇರಿಕಾ ಸೇರಿದಂತೆ ಜಗತ್ತಿನಾದ್ಯಂತ ಒಂದು ಕೋಟಿ ಮಂದಿ ಭಗವದ್ಗೀತಾ ಲೇಖನಯಜ್ಞದಲ್ಲಿ ಪಾಲ್ಗೊಳಲಿದ್ದಾರೆ. 2024 ರ ಉಡುಪಿ ಪರ್ಯಾಯದ ಬಳಿಕ ಲೇಖನವನ್ನು ಸಮರ್ಪಿಸಿ ಪರ್ಯಾಯ ಶ್ರೀಗಳಿಂದ ಪ್ರಸಾದ ರೂಪದಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆಸಕ್ತರಿಗೆ ಪುಸ್ತಕ ಹಾಗೂ ಮಾಹಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಭಾದ ಜಿಲ್ಲಾ ಸಂಚಾಲಕಿ ಉಮಾ ಸೋಮಯಾಜಿ , ಬಂಟ್ವಾಳ ಕೂಟ ಮಹಾಜಗತ್ತಿನ ಅಧ್ಯಕ್ಷ ಜಗದೀಶ್ ಹೊಳ್ಳ , ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ, ಎಮ್ ಎನ್ ಕುಮಾರ್ ಮೆಲ್ಕಾರ್ , ಡಾ. ಗೋವರ್ದನ್ ರಾವ್ ಸೂರ್ಯವಂಶ ಬಿ.ಸಿ.ರೋಡ್ ,ತಂತ್ರಿಗಳಾದ ಸುಬ್ರಮಣ್ಯ ಭಟ್ ಸಜಿಪ ಮೊದಲಾದವರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.
ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಅನಿಸಿಕೆ ವ್ಯಕ್ತ ಪಡಿಸಿದರು. ಬಿ.ಸಿ.ರೋಡಿನ ಕಚೇರಿಯಲ್ಲಿ ಪ್ರತಿ ಗುರುವಾರ ಸಂಜೆ ಪುಸ್ತಕ ಪಡೆಯಬಹುದು ಎಂದು ಸಂಚಾಲಕ ರಾಜಾರಾಮ ಐತಾಳ್ ಕಂದೂರು ( 9019767370) ಮಾಹಿತಿ ನೀಡಿದರು. ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ಸ್ವಾಗತಿಸಿ, ನಿರೂಪಿಸಿದರು.
