ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯ….
ಪುತ್ತೂರು: ಪುತ್ತೂರು -ವಿಟ್ಲ ರಸ್ತೆಯ ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆಯಿಂದ ನಡೆಯುತ್ತಿದೆ.
ಪುತ್ತೂರು ತಹಶೀಲ್ದಾರ್‌ರವರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿಯಿಂದ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ ಗಂಟೆ ಆರಕ್ಕೆ ನಡೆಯಿತು. ಸುಮಾರು 12 ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.
ಅನಧಿಕೃತ ಅಂಗಡಿಗಳ ತೆರವು ಕುರಿತು ಗ್ರಾಮ ಪಂಚಾಯತ್ ನಿಂದ ಈ ಹಿಂದೆ ನೋಟೀಸ್ ನೀಡಲಾಗಿತ್ತು. ಆದರೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿ ಇದೀಗ ಕೋರ್ಟ್ ಆದೇಶದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.