ಯುವಜನ ಸೇವೆಯಲ್ಲಿ ಮಾನವೀಯತೆ ಮುಖ್ಯ ಟಿ ಎಂ ಶಾಹಿದ್ ತೆಕ್ಕಿಲ್…
ಮಂಗಳೂರು:ಮಂಗಳೂರಿನ ಕೊಣಾಜೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನನ್ನ ಭಾರತ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸಹಯೋಗದಲ್ಲಿ 2025 – 26 ನೇ ದಕ್ಷಿಣ ಕನ್ನಡ ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.
ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಇಂದು ವಿವೇಕಾನಂದರು ನಮಗೆಲ್ಲ ಆದರ್ಶ ಪ್ರಾಯರಾಗಿದ್ದು, ಯುವಜನತೆ ಶಾಂತಿ ಸಹಬಾಳ್ವೆಯಿಂದ ಜಾತ್ಯಾತೀತ ಜೀವನವನ್ನು ನಡೆಸಬೇಕು. ಆಗ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರ ಕನಸು ನನಸಾಗುತ್ತದೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು 39ನೇ ವರ್ಷದಲ್ಲಿ ಪ್ರಪಂಚದ ಯುವಕರ ಮಾರ್ಗದರ್ಶಕರಾಗಿ ಬೆಳೆದದ್ದು ಅದ್ಭುತ, ಸಣ್ಣ ಪ್ರಾಯದಲ್ಲೇ ದೊಡ್ಡ ಆಲೋಚನೆ ಹೊಂದಿ ಇಂದು ರಾಷ್ಟದ ಯುವಕರಿಗೆ ಆದರ್ಶರಾಗಿದ್ದಾರೆ ಎಂದು ತಿಳಿಸಿದ ಅವರು ಯುವ ಸಮುದಾಯಕ್ಕೆ ನವ ರಾಷ್ಟ್ರ ಕಟ್ಟುವ ಶಕ್ತಿ ಇದೆ ಎಂದರು.
ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಉಮರ್ ಯು ಹೆಚ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ದಾಮೋಧರ ಹಾಗೂ ಯುವಜನ ಇಲಾಖೆಯ ಜಂಟಿ ನಿರ್ದೇಶಕ ಒಕ್ಕೂಟದ ನಿರ್ದೇಶಕರಾದ ಪ್ರದೀಪ್ ಡಿ ಸೋಜ ಉಪಸ್ಥಿತರಿದ್ದರು.







