ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ, ಪ್ರತಿಭಟನಾ ಸಭೆ…

ಸುಳ್ಯ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿರುವ ರಾಜ್ಯಪಾಲರ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಪಾದಯಾತ್ರೆಯು ಕಲ್ಲುಗುಂಡಿಯ ಮುಖ್ಯ ಪೇಟೆಯಲ್ಲಿ ಆ. 20 ರಂದು ನಡೆಯಿತು.

ಪ್ರತಿಭಟನಾ ಪಾದಯಾತ್ರೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಚಾಲನೆ ನೀಡಿದರು.
ಬಳಿಕ ಕಲ್ಲುಗುಂಡಿಯ ಕೂಲಿಶೆಡ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ” ಭೋಲೋ ಭಾರತ್ ಮಾತಾಕಿ ಜೈ”, “ತೊಲಗಲಿ ತೊಲಗಲಿ ರಾಜ್ಯ ಪಾಲರು ತೊಲಗಲಿ” , ” ಗೋ ಬ್ಯಾಕ್ ಗೋ ಬ್ಯಾಕ್ ಗವರ್ನರ್ “, “ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ” ಘೋಷಣೆಗಳನ್ನು ಕೂಗುತ್ತಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಯ ಮೂಲಕ ಸಾಗಿ ಬಂದು ಬಳಿಕ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಈ ವೇಳೆ ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ , ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಕೆ.ಪಿ ಜಾನಿ, ದ.ಕ ಜಿಲ್ಲಾ ಕಾಂಗ್ರೆಸ್ ಮುಖಂಡ ಲಕ್ಷ್ಮೀಶ ಗಬಲಡ್ಕ ಅವರು ಕೇಂದ್ರ ಸರಕಾರದ ಕೈ ಗೊಂಬೆಯಾಗಿ ವರ್ತಿಸುವ ರಾಜ್ಯಪಾಲರ ವಿರುದ್ಧ ಮತ್ತು ನಾಡಿನ ಜನತೆಗೆ ಮಾಡುವ ಭ್ರಷ್ಟಾಚಾರ ಬಗ್ಗೆ ಮಾತುಗಳನ್ನಾಡಿದರು.
ಈ ವೇಳೆ ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಟಿ.ಐ. ಲೂಕಾಸ್, ದ.ಕ ಸಂಪಾಜೆ ಗ್ರಾಂ. ಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ. ಕೆ ಹಮೀದ್ , ಕೊಡಗು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್, ನಾಪೋಕ್ಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಕೆ. ಕೆ., ಕೊಡಗು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪ್ರಮುಖ ಸೂರಜ್ ಹೊಸೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬುಸಾಲಿ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಕೆ.ಪಿ.ಸಿ.ಸಿ ವಕ್ತಾರ ಶೌವಾದ್, ಸಂಪಾಜೆ ಗ್ರಾಂ.ಪಂ. ಸದಸ್ಯರುಗಳಾದ ಕೆ. ಆರ್ ಜಗದೀಶ್ ರೈ, ಸುಂದರಿ ಮುಂಡಡ್ಕ, ಲಿಸಿ ಮೊನಾಲಿಸಾ, ವಿಮಲಾ ಪ್ರಸಾದ್, ಅನುಪಮಾ, ದ.ಕ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸೊಸೈಟಿಯ ನಿರ್ದೇಶಕರಾದ ಹೆಚ್. ಎ ಹಮೀದ್, ಬಿ.ಎಸ್ ಯಮುನಾ, ಗ್ಯಾರೆಂಟಿ ಸಮಿತಿ ಸದಸ್ಯರುಗಳಾದ ಕಾಂತಿ. ಬಿ. ಎಸ್, ರಾಜು ನೆಲ್ಲಿಕುಮೇರಿ, ಕಾಂಗ್ರೆಸ್ ಪ್ರಮುಖರಾದ ಜಿಲ್ಲಾ ಅಲ್ಪ ಸಂಖ್ಯಾತ ಉಪಾಧ್ಯಕ್ಷ ಇಬ್ರಾಹಿಂ ಎ.ಕೆ ,ರಹೀಂ ಬೀಜದಕಟ್ಟೆ, ಅರಂತೋಡು ಅಲ್ಪ ಸಂಖ್ಯಾತ ಘಟಕದ ಜುಬೈರ್, ಅಣ್ಣಾ ದೊರೈ ಅಡ್ಯಡ್ಕ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯ ಕುಮಾರ್ ಅಡಿಂಜ, ಧರ್ಮಪಾಲ ಕೊಯಿಂಗಾಜೆ , ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ಪ್ರಮುಖರಾದ ಶಹೀದ್ ಪಾರೆ, ಸಾಸಿರ್ ಉಗ್ರಾಣಿ, ಚೆಂಬು ವಲಯ ಕಾಂಗ್ರೆಸ್ ಮುಖಂಡರಾದ ರವಿ ರಾಜ್ ಹೊಸೂರು, ನವೀನ್ ರಾಮಕಜೆ , ವಸಂತ ಪೆಲ್ತಡ್ಕ, ತಾಜು ಮೊಹಮ್ಮದ್ ಸಂಪಾಜೆ, ಪಿ. ಎ ಉಮ್ಮರ್ ಗೂನಡ್ಕ, ಶಮೀರ್ ತಾಜ್ ಸಂಪಾಜೆ , ಏ. ಕೆ ಹನೀಫ್, ರಿತಿನ್ ಡೆಮ್ಮಲೆ, ಎಸ್. ಪಿ. ಅಬ್ದುಲ್ ರಹ್ಮಾನ್ , ಬೆಂಜಮೀನ್ ಡಿಸೋಜಾ, ಶಿವಲಿಂಗ ಎರಕಡಪು , ಸೆಬಾಸ್ಟಿನ್ ನೆಲ್ಲಿ ಕುಮೇರಿ ಮತ್ತಿತರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯದರ್ಶಿ ಲೂಕಸ್ ಟಿ.ಐ ಸ್ವಾಗತಿಸಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ ವಂದಿಸಿದರು. ಸವಾದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.

whatsapp image 2024 08 21 at 9.30.22 am

whatsapp image 2024 08 21 at 9.30.24 am

whatsapp image 2024 08 21 at 9.30.24 am (1)

Sponsors

Related Articles

Back to top button