ಭಾರತೀಯ ಜನತಾ ಪಕ್ಷ ದ ಸ್ಥಾಪನಾ ದಿನ ಆಚರಣೆ….

ಸುಳ್ಯ: ಭಾರತೀಯ ಜನತಾ ಪಕ್ಷ ದ ಸ್ಥಾಪನಾ ದಿನದ ಅಂಗವಾಗಿ ಕೇರ್ಪಳ, ಕುರುಂಜಿ ಗುಡ್ಡೆ ಹಾಗೂ ಭಸ್ಮಡ್ಕ ವಾರ್ಡ್ ಗಳನ್ನೊಳಗೊಂಡ ಬೂತ್ ನಲ್ಲಿ ಸಭೆ ನಡೆಸಿ ಪಕ್ಷದ ಧ್ವಜವನ್ನು ಹಾರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಉಪಾಧ್ಯಕೆ ಮೋಹಿನಿ ನಾಗರಾಜ, ನಗರ ಪಂಚಾಯತು ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ, ನಗರ ಪಂಚಾಯತು ಸದಸ್ಯರುಗಳಾದ ಪೂಜಿತಾ ಶಿವಪ್ರಸಾದ, ಸುಧಾಕರ ಕುರುಂಜಿಭಾಗ್, ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕೇರ್ಪಳ, ಬೂತ್ ಸಮಿತಿಯ ಅವಿನಾಶ್ ಕುರುಂಜಿ ಹಾಗೂ ಪ್ರೇಮ ಸೋಮನಾಥ ಉಪಸ್ಥಿತರಿದ್ದರು.