ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಏಳನೇ ಮಾಸಿಕ ಸಭೆ…

ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಏಳನೇ ಮಾಸಿಕ ಸಭೆ ಬಿಸಿ ರೋಡಿನ ಸಂಚಯಗಿರಿ ಬಿಎಸ್ಏನ್ಎಲ್ ನಿವೃತ್ತ ಅಧಿಕಾರಿ ಲಕ್ಷ್ಮೀನಾರಾಯಣ ಭಟ್ ಮನೆಯಲ್ಲಿ ಕೆ ರಮೇಶ್ ಹೊಳ್ಳ ಅಧ್ಯಕ್ಷತೆಯಲ್ಲಿ ಜರಗಿತು.
ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ, ಲಕ್ಷ್ಮೀನರಸಿಂಹ ಅಷ್ಟೋತ್ತರ ಶತನಾಮ ಪಠಣ, ಪುರುಷ ಸೂಕ್ತ ಪಠಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ವೇದಮೂರ್ತಿ ಶಿವರಾಮ ಮೈಯ್ಯ. ಅರ್ಬಿ ನಾರಾಯಣ ಸೋಮಯಾಜಿ, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ನ್ಯಾಯವಾದಿ ನಾರಾಯಣ ಸೋಮಯಾಜಿ, ಪ್ರದೀಪ್ ಹೊಳ್ಳ, ಜಯರಾಮ ಮಯ್ಯ, ರಾಮಕೃಷ್ಣ ರಾವ್, ನಿಕಟ ಪೂರ್ವ ಅಧ್ಯಕ್ಷ ಜಗದೀಶ ಹೊಳ್ಳ, ಕೆ ನರೇಶ್ ಹೊಳ್ಳ, ನಿಕಟಪೂರ್ವ ಕಾರ್ಯದರ್ಶಿ ಶಂಕರನಾರಾಯಣ ರಾವ್, ರಾಧಾಕೃಷ್ಣ ಮೈಯ್ಯ ಕೆ, ರವಿಶಂಕರ ಮಯ್ಯ, ಸುರೇಶ್ ರಾವ್, ಸುರೇಶ್ ಹೊಳ್ಳ, ಯಮುನಾ, ಭಾರತಿ ಶ್ರೀಧರ ರಾವ್ ಮೊದಲಾದವರು ಭಾಗವಹಿಸಿದರು. ವಿದ್ವಾನ್ ಡಾ ಸೋಮಶೇಖರ ಮೈಯ್ಯ ಬಳಗದವರಿಂದ ಭಜನಾ ಸಂಕೀರ್ತನೆ ಸತ್ಸಂಗ ನಡೆಯಿತು.