ಪೆರಾಜೆ ಶ್ರೀವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಂಕಲ್ಪ…

ಬಂಟ್ವಾಳ:ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರಾಜೆ ಇದರ ಜೀರ್ಣೋದ್ಧಾರ ಪ್ರಯುಕ್ತ ಪ್ರಶ್ನಾ ಚಿಂತನೆ ದೇವಸ್ಥಾನದಲ್ಲಿ ನ.11 ರಂದು ನೆರವೇರಿತು.
ದೇವಸ್ಥಾನವು ಪೆರಾಜೆ , ಮಾಣಿ, ಅರೆಬೆಟ್ಟು ಸೀಮಾ ಗ್ರಾಮಗಳಿಗೆ ಸಂಬಂಧಪಟ್ಟಿದೆ.
ಮಂಗಳೂರು -ಬೆಂಗಳೂರು ಮತ್ತು ಮಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗಳ ಮಧ್ಯೆ ಇರುವ ದೇವಾಲಯ ಮಾಣಿ,ಬುಡೋಳಿ,ನೇರಳಕಟ್ಟೆಯಿಂದ ಸಮಾನ ದೂರದ ಸಾದಿಕುಕ್ಕು ಪರಿಸರದಲ್ಲಿದೆ. ಕೆದಿಲ,ಕಡೇಶ್ವಾಲ್ಯ,ಬರಿಮಾರು,ಬಾಳ್ತಿಲ,ವೀರಕಂಭ,ಅನಂತಾಡಿ,ನೆಟ್ಲ ಮುಡ್ನೂರು ಗ್ರಾಮಗಳ ಕೇಂದ್ರ ಸ್ಥಾನದಲ್ಲಿ ಈ ಪುರಾತನ ದೇವಾಲಯವಿದೆ.
ನೀಲೇಶ್ವರ ‌ಶ್ರೀ ಪದ್ಮನಾಭ ತಂತ್ರಿ ಉಚ್ಚಿಲ ಇವರ ಮಾರ್ಗದರ್ಶನದಲ್ಲಿ ಸಿ.ವಿ. ಪೊದುವಾಳ್ ಪಶ್ನಾಚಿಂತನೆಯನ್ನು ನಡೆಸಿಕೊಟ್ಟರು.ಪುದುಕೋಳಿ ಗೋವಿಂದ ಭಟ್, ಸುಬ್ರಮಣ್ಯ ಭಟ್ ಮುಂಗೂರು ಸಹಕರಿಸಿದರು.
ಪುಷ್ಪರಾಜ ಚೌಟ ಮಾಣಿ ಇವರ ಯಜಮಾನತ್ವದಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ನೆರವೇರಿಸಿ ಸಂಕಲ್ಪ ಮಾಡಲಾಯಿತು.ಬಳಿಕ ದೇವಸ್ಥಾನ ಪ್ರಾಕಾರ , ಶ್ರೀ ರಕ್ತೇಶ್ವರೀ ಸನ್ನಿಧಿ ,ನಾಗ ಸನ್ನಿಧಿ ಹಾಗೂ ಜೀರ್ಣೋದ್ಧಾರದ ಬಗ್ಗೆ ರಾಶಿ ಫಲವನ್ನು ತಿಳಿದುಕೊಳ್ಳಲಾಯಿತು. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ದೇವರ ಸಂಪೂರ್ಣ ಅನುಗ್ರಹ ಇದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.
ಪ್ರಮುಖರಾದ ರಾಜಾರಾಮ ಕಾಡೂರು ಇವರ ನೇತೃತ್ವದಲ್ಲಿ ನಡೆದ ಚಿಂತನಾ ಕೂಟದಲ್ಲಿ ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಗಣ್ಯರಾದ ಸಂತೋಷ ಕುಮಾರ್ ಅರೆಬೆಟ್ಟು , ಚಂದ್ರಹಾಸ ಶೆಟ್ಟಿ ಬುಡೋಳಿ , ಕೆ.ಟಿ.ನಾಯ್ಕ,ಡಾ.ಶ್ರೀನಾಥ ಆಳ್ವ, ಸಚ್ಚಿದಾನಂದ ರೈ ಪಾಳ್ಯ, ಶ್ರೀನಿವಾಸ ಪೂಜಾರಿ, ಜನಾರ್ದನ ಪಾಳ್ಯ, ಕುಶಲ ಎಮ್. ಮಂಜೊಟ್ಟಿ , ದೇವದಾಸ,ದಿವಾಕರ ಶಾಂತಿಲ, ರಾಘವ ಏಣಾಜೆ,ಮಾಧವ ಪಾಳ್ಯ, ಪುರುಷೋತ್ತಮ ಮಡಲ , ನಾರಾಯಣ ಎಮ್.ಪಿ, ಸಂದೀಪ್ ಕುಮಾರ್ , ಲಕ್ಷ್ಮೀಶ, ಯತಿರಾಜ ,ಜಯಾನಂದ ಪೆರಾಜೆ, ಶೇಖರ ಸಾದಿಕುಕ್ಕು, ನಾಗೇಶ ಕೊಂಕಣಪದವು, ಹರೀಶ್ ರೈ ಪಾನೂರು, ಶ್ವೇತಾ ಕಾಡೂರು , ರತ್ನಾ ಮಂಜೊಟ್ಟಿ , ಪಿಡಿಒ ಶಂಭು ಕುಮಾರ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

whatsapp image 2024 11 11 at 10.56.46 pm (1)

whatsapp image 2024 11 11 at 10.56.46 pm

Sponsors

Related Articles

Back to top button