ಕಲ್ಲಡ್ಕ- ಬೃಹತ್ ಉದ್ಯೋಗ ಮೇಳ – 1180 ಮಂದಿ ಉದ್ಯೋಗಕ್ಕೆ ನೋಂದಾವಣೆ…
ಬಂಟ್ವಾಳ:ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು, ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿ ಡಿ.17 ರಂದು ನಡೆಯಿತು.
ಬಂಟ್ವಾಳ ಶಾಸಕ ರಾಜೆಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿ ಮಾತನಾಡಿ, ಉದ್ಯೋಗ ಮೇಳದಿಂದ ಸೂಕ್ತ ಉದ್ಯೋಗ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಶೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಚಾಲಕ ವಸಂತ ಮಾಧವ,ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ , ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರಿನ ಎಚ್ಚರಪ್ಪ ಬಡಿಗೇರ ,ಲಯನ್ಸ್ ಕ್ಲಬ್‍ನ ಪ್ರಾಂತ ಅಧ್ಯಕ್ಷ ಲಕ್ಷ್ಮಣ್ ಅಗ್ರಬೈಲು ಉಪಸ್ಥಿತರಿದ್ದರು. ಅಲೋಸಿಯಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರೊನಾಲ್ಡ್ ಪಿಂಟೋ ವೃತ್ತಿ ಮಾರ್ಗದರ್ಶನ ತರಬೇತಿ ನೀಡಿದರು.
ಉದ್ಯೋಗ ಮೇಳದಲ್ಲಿ 1180 ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. 53 ಕಂಪೆನಿಗಳು ಇವರ ಸಂದರ್ಶನ ಪಡೆದರು. 60 ಕ್ಕೂ ಹೆಚ್ಚು ಮಂದಿಗೆ ಆದೇಶ ಪತ್ರ ದೊರೆಯಿತು 410 ಕ್ಕೂ ಅಧಿಕ ಮಂದಿಗೆ 2ನೇ ಸುತ್ತಿನ ಸಂದರ್ಶನಕ್ಕೆ ಆಹ್ವಾನ ನೀಡಲಾಯಿತು.
ಶ್ರೀ ರಾಮ ಪ್ರಥಮ ದೆರ್ಜ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಸ್ವಾಗತಿಸಿದರು. ವಿದ್ಯಾ ಕೇಂದ್ರ ಸಂಚಾಲಕ ವಸಂತ ಮಾಧವ ಪ್ರಸ್ತಾವನೆ ಗೈದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ ವಿದ್ಯಾಕೇಂದ್ರಕ್ಕೆ ಸ್ಮರಣಿಕೆ ನೀಡಿದರು . ಉದ್ಯೋಗ ವಿನಿಮಯ ಕೇಂದ್ರದ ದಯಾನಂದ ಪೆರಾಜೆ ಸಹಕರಿಸಿದರು. ವಿದ್ಯಾರ್ಥಿ ಹರ್ಷಿತ್ ವಂದಿಸಿದರು.