ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ನಿಧನ…
ಸುಳ್ಯ: ಪ್ರತಿಷ್ಠಿತ ತೆಕ್ಕಿಲ್ ಮನೆತನದ ಖ್ಯಾತ ಮರ ಉದ್ಯಮಿ,ಅರಣ್ಯ ಗುತ್ತಿಗೆದಾರ,ಜಮೀನ್ದಾರ , ಟ್ರಾನ್ಸ್ಪೋರ್ಟ್ ಹಾಗೂ ಪ್ರಮುಖ ಕೃಷಿಕರಾಗಿದ್ದ ದಿವಂಗತ ತೆಕ್ಕಿಲ್ ಮೊಹಮದ್ ಹಾಜಿ ಯವರ ಹಾಗೂ ಅರಂತೋಡು ದಿವಂಗತ ಪಟೇಲ್ ಕುಂಞಿಮಿನ ಪುತ್ರ ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ(77ವ) ನಿಧನ ರಾಗಿದ್ದಾರೆ.
ತಂದೆ ತೆಕ್ಕಿಲ್ ಮೊಹಮ್ಮದ್ ಹಾಜಿಯವರ ನಿಧನ ನಂತರ 1973 ರಿಂದ 1983 ರವರೆಗೆ ಅರಂತೋಡು ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದ್ ಗೆ ಹಾಗೂ ದರ್ಗಾ ಶರೀಫ್ ಗೆ ಸಹೋದರರಾ ಟಿ ಎಂ ಅಹಮದ್ ಕುಂಞಿ ತೆಕ್ಕಿಲ್, ಟಿ ಎಂ ಬಾಬ ಹಾಜಿ ತೆಕ್ಕಿಲ್ ರವರ ಜೊತೆ ಜಂಟಿ ಸ್ಥಳವನ್ನು ವಖ್ಫ್ ಮಾಡಿ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಕೊಡಗಿನಲ್ಲಿ ಮರದ ವ್ಯಾಪಾರಿಯಾಗಿ ಕೇರಳದಲ್ಲಿ ಕರ್ನಾಟಕದಲ್ಲಿ ಟಿ ಎಂ ಗೂಡ್ಸ್ ಸೇವೆ ಹಾಗೂ ಆರಂತೋಡಿನ ಮತ್ತು ಗೂನಡ್ಕದಲ್ಲಿ 70 ರ ದಶಕದಲ್ಲಿ ಪ್ರಮುಖ ದಿನಸಿ ಅಂಗಡಿ ವ್ಯಾಪಾರಿಯಾಗಿದ್ದರು ಸರಕಾರದ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಪ್ರಮುಖ ಗುತ್ತಿಗೆದಾರರಾಗಿ ಸುಮಾರು ಐವತ್ತು ವರ್ಷಗಳ ಕಾಲ ವ್ಯಾಪಾರ ನಡೆಸಿದ್ದು ಸುಳ್ಯದ ಅನ್ಸಾರುಲ್ ಮುಸ್ಲಿಮೀನ್, ಅರಂತೋಡಿನ ಅನ್ವಾರುಲ್ ಹುದಾ ಯಂಗಮೆನ್ಸ್, ಗೂನಡ್ಕ ಪೇರಡ್ಕ ಎಂ ಆರ್ ಡಿ ಎ ಸಹಿತ ದ ಕ,ಕೊಡಗಿನ ಕಾಸರಗೋಡು ಭಾಗದಲ್ಲಿ ಹಲವು ಸಂಘ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದು ಸ್ಥಾಪಕ ಸದಸ್ಯರಾಗಿದ್ದು, ಕೃಷಿ, ಕ್ರೀಡೆ, ಸಿನಿಮಾ, ಮರದ ವ್ಯಾಪಾರ,ಅರಣ್ಯ ಮತ್ತು ನೀರಾವರಿ ರಸ್ತೆ ಗಳ ಗುತ್ತಿಗೆದಾರಾರಾಗಿದ್ದು ವಾಹನ ರಂಗದಲ್ಲೂ ಆಸಕ್ತಿ ಇದ್ದವರು ಪತ್ನಿ ಕಾಸರಗೋಡು ಬೇವಿಂಜೆಯ ಏರ್ಲೈನ್ಸ್ ಕುಟುಂಬದ ನಬೀಸ ಹಜ್ಜುಮ್ಮ, ಮಕ್ಕಳು ಟಿ ಎಂ ರಹಿಯ ತೆಕ್ಕಿಲ್ , ಸಜ್ಜಾದ್ ತೆಕ್ಕಿಲ್ , ನಿಜಾರ್ ತೆಕ್ಕಿಲ್ , ಜಾಫರ್ ತೆಕ್ಕಿಲ್ , ರುಕ್ಸನ ಬಾನು ತೆಕ್ಕಿಲ್ ಮೊವ್ವಲ್, ಅಳಿಯಂದಿರು ಉದ್ಯಮಿಗಳಾದ ಕೆ ಎಂ ಶಾಫಿ ಕಾಸರಗೋಡು, ಇಬ್ರಾಹಿಂ ಅಬ್ದುಲ್ಲ ಮೊವ್ವಲ್,ಸಹೋದರರು ದಿವಂಗತ ಟಿ ಎಂ ಅಬ್ದುಲ್ಲ ತೆಕ್ಕಿಲ್ ಪೇರಡ್ಕ,ದಿವಂಗತ ತೆಕ್ಕಿಲ್ ಇಬ್ರಾಹಿಂ ಹಾಜಿ ಪೇರಡ್ಕ,ಟಿ ಎಂ ಅಹಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಟಿ ಎಂ ಮೂಸನ್ ಹಾಜಿ ತೆಕ್ಕಿಲ್ ಗೂನಡ್ಕ, ಟಿ ಎಂ ಬಾಬ ಹಾಜಿ ತೆಕ್ಕಿಲ್ ಅರಂತೋಡು, ಸಹೋದರಿಯರು ದಿವಂಗತ ತೆಕ್ಕಿಲ್ ಕುಂಞಮಿನ ಪೇರಡ್ಕ ಕೋಂ ಅಬ್ದುಲ್ ರಹಿಮಾನ್ ಕುಂಬ್ಳೆ , ದಿವಂಗತ ತೆಕ್ಕಿಲ್ ನಬೀಸ ಹಜ್ಜುಮ್ಮ ಕೋಂ ದಿವಂಗತ ಆಮೂಹಾಜಿ ಚೆಮ್ನಡ್ ಅಡಿಮರದ್ಕ ಅರಂತೋಡು,ದಿವಂಗತ ತೆಕ್ಕಿಲ್ ಮರಿಯಮ್ಮ ಕೋಂ ದಿವಂಗತ ಮಹಮ್ಮದ್ ಪಿ ಎಸ್ ಶೇಣಿ ಚೋಕ್ಕಡಿ,ತೆಕ್ಕಿಲ್ ಬೀಫಾತಿಮ ಹಜ್ಜುಮ್ಮ ಕೋಂ ದಿವಂಗತ ಹೆಚ್ ಎಂ ಅಬ್ಬಾಸ್ ಹಾಜಿ ಅರಂತೋಡು, ತೆಕ್ಕಿಲ್ ಆಯಿಷಾ ಹಜ್ಜುಮ್ಮ ಕೋಂ ದಿವಂಗತ ಮುನಂಬ ಅಬೂಬಕ್ಕರ್ ಹಾಜಿ ಚೆಂಗಳ ಕಾಸರಗೋಡು, ತೆಕ್ಕಿಲ್ ಜೈಬುನ್ನಿಸ ಕೋಂ ದಿವಂಗತ ಸಿ ಎಂ ಇಕ್ಬಾಲ್ ಬೆಂಗಳೂರು.ಪ್ರಸ್ತುತ ಕಾಸರಗೋಡು ಚೆರ್ಕಳಂನಲ್ಲಿ ವಾಸ್ತವ್ಯ.ಇಂದು ಸಂಜೆ ಅವರ ದಫನ ಕಾರ್ಯ ಚೆರ್ಕಳದಲ್ಲಿ ನಡೆಯಲಿದೆ.