ಅಮರ ಸುಳ್ಯದ ಇತಿಹಾಸದ ಪ್ರಭಾಕರ ಶಿಶಿಲರ ಕೃತಿ ಕೊಡಗು – ಕೆನರಾ ರೈತ ಬoಡಾಯ ಪುಸ್ತಕ ಸ್ವೀಕರಿಸಿ ಕಣ್ಣಾಯಿಸಿದ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ…
ಸುಳ್ಯ: 1837 ರಲ್ಲಿ ಸುಳ್ಯದಲ್ಲಿ ಉಂಟಾದ ರೈತ ಕ್ರಾಂತಿಯ ಇತಿಹಾಸವನ್ನು ವಿಶ್ರಾಂತ ಪ್ರಾoಶುಪಾಲ ಪ್ರೊ. ಪ್ರಭಾಕರ ಶಿಶಿಲ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಸಜ್ಜನ ಪ್ರತಿಷ್ಠಾನಾದ ಡಾ. ಉಮ್ಮರ್ ಬೀಜದಕಟ್ಟೆ ಪ್ರಕಾಶನ ಗೊಳಿಸಿದ್ದಾರೆ. ಈ ಪುಸ್ತಕ ವನ್ನು ಸುಳ್ಯಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯಸಭಾ ವಿಪಕ್ಷ ಉಪನಾಯಕರಾದ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಕೆಪಿಸಿಸಿ ಅಲ್ಪಸoಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಹಸ್ತಾoತರಿಸಿದರು.
ಕೃತಿ ಸ್ವೀಕರಿಸಿದ ಖರ್ಗೆಯವರು ಎರಡೆರಡು ಬಾರಿ ಪುಸ್ತಕ ಬಿಡಿಸಿ ಉತ್ಸಾಹದಿಂದ ಕಣ್ಣು ಹಾಯಿಸಿ ಪುಸ್ತಕವನ್ನು ಕೊಂಡೊಯ್ದರು.
1834 ರಲ್ಲಿ ಕೊಡಗಿನ ರಾಜನನ್ನು ಕೆಳಗೆ ಇಳಿಸಿದ ಮೇಲೆ 110 ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ದ. ಕ. ಜಿಲ್ಲೆಗೆ ಸೇರಿಸಲಾಯಿತು. 1799 ರಲ್ಲಿ ಟಿಪ್ಪುಸುಲ್ತಾನ್ ಹತ್ಯೆ ಯಾದ ನಂತರ ದ. ಕ. ಜಿಲ್ಲೆ ಬ್ರಿಟಿಷರ ಆಳ್ವಿಕೆಗೆ ಬಂತು ಬ್ರಿಟಿಷರು ಉತ್ಪತ್ತಿಯ ಅರ್ಧಭಾಗ ಹಣದ ರೂಪದಲ್ಲಿ ಕಂದಾಯ ಕೊಡಬೇಕು ಎಂದು ಶಾಸನ ರೂಪಿಸಿದಾಗ ಕಂದಾಯ ಕಟ್ಟಲು ಹಣವಿಲ್ಲದೆ ಭೂಮಿ ಮಾರಾಟ ಮಾಡಲು ಶುರು ಮಾಡಿದರು. ಅದರೊಂದಿಗೆ ಉಪ್ಪು ಮತ್ತು ಹೊಗೆಸೊಪ್ಪು ಸ್ವಾಮ್ಯವನ್ನು ಅವರಿಗೆ ಬೇಕಾದವರಿಗೆ ಒಪ್ಪಿಸಿ ಬೆಲೆ ಯೇರಿಕೆಯಿಂದ ರೈತರು ತತ್ತರಿಸಿದಾಗ ರೈತ ಹೋರಾಟ ಪ್ರಾರಂಭಗೊಂಡಿತು. ಕೆದoಬಾಡಿ ರಾಮಯ್ಯ ಗೌಡರು ಹುಲಿಕಡಿದ ನಂಜಯ್ಯ ಮತ್ತು ಕಲ್ಯಾಣ ಸ್ವಾಮಿಯನ್ನು ಮುಂದಿಟ್ಟು ಹೋರಾಟ ನಡೆಸಿದರು. ಈ ಹೋರಾಟಗಾರರನ್ನು ಬ್ರಿಟಿಷರು ಗಲ್ಲಿಗೇರಿಸಿದ ಅಮರ ಸುಳ್ಯದ ಕ್ರಾಂತಿ ಯ ಚರಿತ್ರೆ ಈ ಪುಸ್ತಕ ದಲ್ಲಿದೆ