ಕಮ್ಯೂನಿಟಿ ಕಿಚನ್ -ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಧನಸಹಾಯ….
ಸುಳ್ಯ: ಕೆಪಿಸಿಸಿ ಮಾಜಿ ಕಾರ್ಯದರ್ಶಿ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ
ಟಿ ಎಂ ಶಹೀದ್ ತೆಕ್ಕಿಲ್ ಮತ್ತು ಕುಟುಂಬಸ್ಥರ ವತಿಯಿಂದ ಕೋವಿಡ್ 19 ಕೊರೊನ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಎಂ ಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘದ ಸಾರಥ್ಯದಲ್ಲಿ ವಲಸೆ- ಅಸಂಘಟಿತ 800 ಕಾರ್ಮಿಕರಿಗೆ ದಿನ ನಿತ್ಯ ಊಟ ಮತ್ತು ಅಹಾರ ಸರಬರಾಜು ಮಾಡುವ ಯೋಜನೆಗೆ ಒಂದು ದಿನದ ಖರ್ಚು ರೂ.18 ಸಾವಿರ ಧನಸಹಾಯವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಖಜಾಂಜಿ ಟಿ. ಎಂ. ಜಾವೇದ್ ತೆಕ್ಕಿಲ್ ಅವರು ಹಸ್ತಾಂತರಿಸಿದರು.
ಕಾರ್ಮಿಕರಿಗೆ ಗುಣಮಟ್ಟದ ಆಹಾರವನ್ನು ಪೂರೈಸುವ ಕಮ್ಯೂನಿಟಿ ಕಿಚನ್ ಕಾರ್ಯಕ್ರಮದ ಅನುಷ್ಠಾನ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪ್ರಾರಂಭ ಮಾಡಿದ ಎಂ ಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘಕ್ಕೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ.ಶಹೀದ್ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ , ಶ್ರೀಮತಿ ಹರಿಣಿ ಸದಾಶಿವ, ಜಿಲ್ಲಾ ವಕ್ಫ್ ಸದಸ್ಯ ಕೆ ಎಂ ಮುಸ್ತಫಾ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ಕಾರ್ಮಿಕ ಮುಖಂಡರುಗಳಾದ ಕೆ ಪಿ ಜಾನಿ, ನಾಗರಾಜ್, ಮಂಜುನಾಥ್, ಮಲ್ಲೇಶಿ ಮೊದಲಾದವರು ಉಪಸ್ಥಿತರಿದ್ದರು