ಕ್ಯಾಂಪ್ಕೊ ಗೆ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಭೇಟಿ – ಖರೀದಿ ಬೆಲೆಯ ಬಗ್ಗೆ ಮಾತುಕತೆ….
ಸುಳ್ಯ: ಕ್ಯಾಂಪ್ಕೊ ಗೆ ನಗರ ಪಂಚಾಯತ್ ಸದಸ್ಯ ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡ ಭೇಟಿ ನೀಡಿ ಅಡಕೆ ದರದ ಬಗ್ಗೆ ಮ್ಯಾನೇಜರ್ ರೊಂದಿಗೆ ಚರ್ಚಿಸಿದರು.
ನಿನ್ನೆ ಕೃಷಿಕರೊಬ್ಬರು ಖಾಸಗಿ ಅಡಕೆ ಅಂಗಡಿಯ ಮತ್ತು ಕ್ಯಾಂಪ್ಕೊ ಅಡಕೆ ಖರೀದಿ ದರ ಏರು ಪೇರಿನ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಗೆ ಬಂದಿದ್ದ ಗ್ರಾಹಕರೊಂದಿಗೆ ಮಾತುಕತೆ ನಡೆಸಿ ನಂತರ ಕಛೇರಿ ಮ್ಯಾನೇಜರ್ ಜತೆಗೆ ಚರ್ಚಿಸಿದರು. ಖಾಸಗಿ ಖರೀದಿಯ ಇಂದಿನ ಬೆಲೆ 265 ರಿಂದ 268 ಇದೆ. ಈ ಬಗ್ಗೆ ಮುಂದಿನ ಖರೀದಿಗೆ ಖಾಸಗಿ ದರದ ಆಸುಪಾಸಿನ ಬೆಲೆಗೆ ಖರೀದಿಸಲಾಗುವುದೆಂದು ಮ್ಯಾನೇಜರ್ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಭವಾನಿಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.