ಸುಳ್ಯ ರೋಟರಿ ಕ್ಲಬ್ ವತಿಯಿಂದ ಆಹಾರದ ಕಿಟ್ ವಿತರಣೆ…..

ಸುಳ್ಯ : ರೋಟರಿ ಕ್ಲಬ್ ಸುಳ್ಯ, ರೋಟರಿ ಸಮುದಾಯ ದಳ ಅರಂಬೂರು ಹಾಗೂ ಇನ್ನರ್ ವೀಲ್ ಕ್ಲಬ್ ಸುಳ್ಯ ಇವುಗಳ ಸಹಯೋಗದೊಂದಿಗೆ ಅಗತ್ಯ ವಸ್ತುಗಳ ಆಹಾರದ ಕಿಟ್ ನ್ನು ಅರಂಬೂರಿನಲ್ಲಿ ಅಗತ್ಯವಿರುವ ಕುಟುಂಬಗಳಿಗೆ ಹಂಚಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ಪುರುಷೋತ್ತಮ ಕಟ್ಟೆಮನೆ, ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಭಾಕರನ್ ನಾಯರ್, ಇನ್ನರ್ ವೀಲ್ ಅಧ್ಯಕ್ಷರಾದ ಡಾ. ಹರ್ಷಿತ ಪುರುಷೋತ್ತಮ, ರೋಟರಿ ಸಮುದಾಯ ದಳದ ಸಭಾಪತಿ ಭಾಸ್ಕರನ್ ನಾಯರ್, ರೊಟೇರಿಯನ್ನರಾದ ಬಾಪು ಸಾಹೇಬ್, ಹರಿರಾಯ ಕಾಮತ್, ಹೇಮಂತ್ ಕಾಮತ್, ರೋಟರಿ ಸಮುದಾಯ ದಳದ ಖಜಾಂಜಿ ಜಗದೀಶ್ ಸರಳಿಕುಂಜ, ಕೃಷ್ಣ ಮೂರ್ತಿ, ಪ್ರಭಾಕರ ರೈ, ಮೊದಲಾದವರು ಉಪಸ್ಥಿತರಿದ್ದರು.