ಬಂಟ್ವಾಳ – ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಹಾಸಭೆ…

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಬಂಟ್ವಾಳ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಡಿ.12 ರಂದು ಬಿ ಸಿ ರೋಡಿನ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಸರಕಾರಿ ಕೆಲಸ ಒತ್ತಡದ ಕೆಲಸ ಆದರೆ ಪ್ರಮಾಣಿಕತೆ ನಿಷ್ಠೆ ,ಶ್ರದ್ಧೆ ಮತ್ತು ಪ್ರೀತಿಯಿಂದ ಕೆಲಸ ಮಾಡಿದಾಗ ಒತ್ತಡ ಕಡಿಮೆಯಾಗುತ್ತದೆ.ದ್ವೇಷ ಅಸೂಯೆಯಿಂದ ಕೆಲಸ ಮಾಡಿದಾಗ ಮನುಷ್ಯನ ಆರೋಗ್ಯ ದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಸಂಘದ ಅಧ್ಯಕ್ಷ ಉಮಾನಾಥ ಮೇರಾವು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ನೌಕರರ ಸರ್ವೋತ್ತಮ ಅಭಿವೃದ್ಧಿಗೆ ಕೊಡುಗೆಯನ್ನು ಸಂಘ ನೀಡಿದೆ ಎಂದರು.ಇಲಾಖಾವಾರು ಸಮಸ್ಯೆಗಳು ಅಥವಾ ಬೇಡಿಕೆಗಳಿದ್ದರೆ ಅದನ್ನು ಚೌಕಟ್ಟಿನ ಮೇಲೆ ಪರಿಹರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಪಿಂಚಣಿದಾರರ ಸಂಘದ ಅಧ್ಯಕ್ಷ ಲ. ಲೋಕನಾಥ ಶೆಟ್ಟಿ ಮಾತನಾಡಿ ನಿವೃತ್ತ ಸರಕಾರಿ ನೌಕರರು ಪಿಂಚಣಿದಾರ ಸದಸ್ಯತ್ವ ಪಡೆದು ಸಂಪೂರ್ಣ ಪ್ರಯೋಜನ ಪಡೆಯಲು ಅವರು ತಿಳಿಸಿದರು.
ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ, ಡಾ. ವಿಶ್ವೇಶ್ವರ ಭಟ್, ಪಿಂಚಣಿದಾರರ ಸಂಘದ ಕಾರ್ಯದರ್ಶಿ ನಿಲೋಜಿರಾವ್, ನಿವೃತ್ತ ವೈದ್ಯರಾದ ಸುರೇಂದ್ರ ನಾಯಕ್ , ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಚಿ ಬಸಯ್ಯ ಅಲಮಟ್ಟಿ, ರಾಜ್ಯ ಪರಿಷತ್ ಜೆ.ಜನಾರ್ದನ, ಉಪಾಧ್ಯಕ್ಷರುಗಳಾದ ಶಮಂತ್ ಕುಮಾರ್, ಮಂಜುನಾಥ್ ಕೆ.ಎಚ್. ಗಾಯತ್ರಿ ಕಂಬಳಿ ಉಪಸ್ಥಿತರಿದ್ದರು.
ಕೊರೊನಾ ವಾರಿಯರ್ಸ್‌ ಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿ ಗಳನ್ನು ಗೌರವಿಸಲಾಯಿತು.ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಸಂತೋಷ್ ವಂದಿಸಿದರು.ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button