ವಿದ್ಯಾರ್ಥಿನಿಯರಿಗೆ ಕಿರುಕುಳ- ಮದ್ರಸ ಶಿಕ್ಷಕನ ವಿರುದ್ದ ಪೋಕ್ಸೋ ದೂರು….

ಕುಂಬಳೆ : ಬಂದ್ಯೋಡಿನ ವಸತಿ ಮದ್ರಸದಲ್ಲಿ ಕಲಿಯುವ ಬಾಲಕಿಯರಿಗೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಮದ್ರಸ ಶಿಕ್ಷಕನ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಿರುಕುಳ ನೀಡುತ್ತಿದ್ದ ಶಿಕ್ಷಕನನ್ನು ತಿರುವನಂತಪುರ ನಿವಾಸಿ ಶಿಯಾದ್ ಉಸ್ತಾದ್ ಎನ್ನಲಾಗಿದೆ.
ಮದ್ರಸದಲ್ಲಿ ಕಲಿಯುತ್ತಿರುವ ಮಂಗಳೂರಿನ ನಿವಾಸಿಗಳಾದ ಬಾಲಕಿಯರು ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದು ಇನ್ನಷ್ಟು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಬಗ್ಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.