ಮೂಡುಬಿದಿರೆಯ ಅಯನಾ.ವಿ.ರಮಣ್ ಕಿರುತೆರೆಗೆ ಪಾದಾರ್ಪಣೆ…..

ಮೂಡುಬಿದಿರೆ:ಪುರಾಣ ಕಥೆಗಳ ಹಿನ್ನಲೆಯಲ್ಲಿ ರಚಿತವಾದ “ಕಟೀಲು ಶ್ರೀ ದೇವಿ ಚರಿತೆ” ಡಿಡಿ ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 10.30ರ ವರೆಗೆ ಪ್ರಸಾರವಾಗುತ್ತಿದ್ದು ಶ್ರೀದೇವಿಯಾಗಿ ಬಹುಮುಖ ಪ್ರತಿಭೆಯ ಕಲಾವಿದೆ ಅಯನಾ ವಿ.ರಮಣ್ ಮೂಡುಬಿದಿರೆ ಅಭಿನಯಿಸುತ್ತಿದ್ದಾರೆ.
ಇದು ಇವರ ಚೊಚ್ಚಲ ಧಾರಾವಾಹಿಯಾಗಿದ್ದು, ದೇವಿಯ ಪಾತ್ರದ ಮೂಲಕ ಕಿರುತೆರೆಗೆ ಪರಿಚಯಿಸಲ್ಪಡುತ್ತಿದ್ದಾರೆ. ಕೆಲವೇ ವಾರಗಳಲ್ಲಿ 50IMG 20190905 WA0037 300x161 ಕಂತುಗಳ ಚಿತ್ರೀಕರಣ ಪೂರೈಸಲಿರುವ ತಂಡ ಅಯನಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಶ್ರೀ ದೇವಿಯ ಪಾತ್ರದ ಬಗ್ಗೆ,ಸಮಗ್ರ ಧಾರಾವಾಹಿಯ ಬಗ್ಗೆ ಕುತೂಹಲ ಹುಟ್ಟುಹಾಕಿದೆ.
ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿನಿಯಾಗಿರುವ ಅಯನಾ, ಪತ್ರಕರ್ತ ಕಲಾವಿದ ಕೆ.ವಿ.ರಮಣ್ ಹಾಗೂ ಮೂಕಾಂಬಿಕಾ ದಂಪತಿಯ ಪುತ್ರಿ.

Related Articles

Leave a Reply

Your email address will not be published. Required fields are marked *