ಆರ್‌.ಕೆ. ನಾಯರ್‌ ಅವರಿಗೆ ಸೌತ್‌ ಗುಜರಾತ್‌ ಸುವರ್ಣ ರತ್ನ ಪ್ರಶಸ್ತಿ…

ಸುಳ್ಯ: ಗುಜರಾತ್‌ನ ದಿವ್ಯ ಭಾಸ್ಕರ್‌ ಪತ್ರಿಕೆ ತನ್ನ ವರ್ಷಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುತ್ತಿರುವ ಸೌತ್‌ ಗುಜರಾತ್‌ ಸುವರ್ಣ ರತ್ನ ಪ್ರಶಸ್ತಿಗೆ ಗುಜರಾತ್‌ನಲ್ಲಿ ಉದ್ಯಮಿಯಾಗಿರುವ, ಪರಿಸರ ಪ್ರೇಮಿ ಡಾ|| ಆರ್‌.ಕೆ. ನಾಯರ್‌ ಅವರು ಭಾಜನರಾಗಿದ್ದಾರೆ.
ಪರಿಶ್ರಮದಿಂದ ಉದ್ಯಮ ಕಟ್ಟಿ ಬೆಳೆಸಿ ನೂರಾರು ಕಾರ್ಮಿಕರಿಗೆ ಉದ್ಯೋಗ ನೀಡುವ ಹಾಗೂ ದೇಶದಾದ್ಯಂತ 88 ಕಾಡು ಮತ್ತು 16 ಲಕ್ಷ ವೃಕ್ಷ ನಿರ್ಮಾಣದ ಮೂಲಕ ದೇಶದಾದ್ಯಂತ ಪರಿಸರ ಕ್ರಾಂತಿ ಮಾಡಿರುವ ಕಾರಣಕ್ಕೆ ಈ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಪಡೆಯುವ 24 ಗಣ್ಯರ ಪೈಕಿ ಡಾ ಆರ್‌.ಕೆ.ನಾಯರ್‌ ಒಬ್ಬರಾಗಿದ್ದಾರೆ.

Sponsors

Related Articles

Back to top button