ಯುವಕರು ಸಮಾಜಕ್ಕೆ ಮಾದರಿಯಾಗಬೇಕು- ಟಿ. ಎಂ. ಶಹೀದ್ ತೆಕ್ಕಿಲ್ ಕರೆ…

ಸುಳ್ಯ: ಯುವಕರು ಮಸೀದಿಯ ಆಡಳಿತ ಮಂಡಳಿ , ಇನ್ನಿತರ ಸಂಘ ಸಂಸ್ಥೆಗಳಿಗೆ ಸೇರಿ ನಾಯಕತ್ವ ಗುಣವನ್ನು ಬೆಳಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ತಮ್ಮನ್ನು ತಾವೆ ತೊಡಗಿಸಿಕೊಳ್ಳಬೇಕು ಮತ್ತು ಸಮಾಜಕ್ಕೆ ಮಾದರಿಯಾಗಬೇಕು ಎಂದು ಟಿ. ಎಂ. ಶಹೀದ್ ತೆಕ್ಕಿಲ್ ಹೇಳಿದರು.
ಅವರು ಆ.15 ರಂದು ಅರಂತೋಡಿನಲ್ಲಿ ನಡೆದ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ನ 44 ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮೆಲ್ಲರ ತಾತ ತಂದೆಯಂದಿರು ಈ ಸಂಸ್ಥೆಯನ್ನು ಈ ಮಟ್ಟದಲ್ಲಿ ಬೆಳೆಯಲು ಅಹೋರಾತ್ರಿ ದುಡಿದಿದ್ದರು. ಅವರು ಅಂದು ಪ್ರಾಮಾಣಿಕವಾಗಿ ದುಡಿದ ಫಲವಾಗಿ ಇಂದು ಸಂಸ್ಥೆಯು ಎತ್ತರಕ್ಕೆ ಬೆಳಿದಿದೆ. ಅರಂತೋಡಿನ ಯುವಕರು, ಡಾಕ್ಟರ್ ಗಳಾಗಿ, ಅಧ್ಯಾಪಕರಾಗಿ, ಇಂಜಿನಿಯರಾಗಿ, ಸರಕಾರಿ ಉದ್ಯೋಗಕ್ಕೆ ಸೇರಬೇಕು. ನಾನು ಅರಂತೋಡು ಮತ್ತು ಸಂಪಾಜೆ ಗ್ರಾಮ ಹಾಗೂ ಸುಳ್ಯ ತಾಲೂಕಿನಾದ್ಯಂತ ಶಾದಿಮಹಲ್ ಕಟ್ಟಡಗಳಿಗೆ, ರಸ್ತೆಗಳಿಗೆ, ಸೇತುವೆ, ಮಸೀದಿ ಮತ್ತು ಮದರಸಗಳಿಗೆ ದಾಖಲೆ ಮೊತ್ತದ ಅನುದಾನ ತಂದಿರುತ್ತೇನೆ ಮುಂದೆಯೂ ಸಂಸ್ಥೆಯ ಶಾದಿ ಮಹಲ್ ಕಟ್ಟಡವನ್ನು ಪೂರ್ಣಗೊಳಿಸಲು ಅನುದಾನ ತರಲು ಪ್ರಯತ್ನಿಸುತ್ತೇನೆ ಅದಕ್ಕೆಲ್ಲ ನಿಮ್ಮೆಲ್ಲರ ಸಹಕಾರ ಬೇಕು ಎಂದು ಟಿ. ಎಂ. ಶಹೀದ್ ತೆಕ್ಕಿಲ್ ಹೇಳಿದರು.
ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ಮಜೀದ್ ಎಸ್.ಎಮ್ ರವರ ವಹಿಸಿದ್ದರು. ಬದ್ರಿಯಾ ಜುಮ್ಮಾಮಸೀದಿ ಆರಂತೋಡು ಖತೀಬ್ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಎ. ಫಸೀಲು ಲೆಕ್ಕ ಪತ್ರವನ್ನು ಮಂಡಿಸಿದರು. ಸಮಾರಂಭದಲ್ಲಿ ಅರಂತೋಡು ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ, ಮದರಸ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಝಹರಿ ತೆಕ್ಕಿಲ್ ಪೇರಡ್ಕ ಭಾಗವಹಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ,ಖಜಾಂಜಿ ಹಾಜಿ ಅಜರುದ್ದೀನ್,ಸದಸ್ಯರುಗಳಾದ ಹನೀಫ್ ಎ. ಮನ್ಸೂರ್ ಪಾರೆಕ್ಕಲ್,ಜುಬೈರ್,ಜವಾದ್ ಪಾರೆಕ್ಕಲ್,ಫಯಾಝ್ ಪಠೇಲ್,ನವಾಜ್ ಉದಯನಗರ,ಸಲಹಾ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಪಠೇಲ್,ಅಬೂಬಕ್ಕರ್ ಪಾರೆಕ್ಕಲ್,ಮೊದಲಾದವರು ಉಪಸ್ಥಿತರಿದ್ದರು. ಮುಂದಿನ ಸಾಲಿಗೆ ಹಿಂದಿನ ಸಮಿತಿಯನ್ನೆ ಮುಂದುವರಿಸಲು ತಿರ್ಮಾನಿಸಲಾಯಿತು. ಸಮಿತಿಗೆ ಹೊಸ ಸದಸ್ಯರನ್ನಾಗಿ ವಹಾಬ್ ಅಡಿಮರಡ್ಕ, ಮುಝಮಿಲ್ ಎ,ಆಶೀಕ್ ಕುಕ್ಕುಂಬಳ, ಸಾದಿಕ್ ಕೊಡಂಕೇರಿ ಇವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಮಜೀದ್ ಸ್ವಾಗತಿಸಿ ಕಾರ್ಯದರ್ಶಿ ಫಸೀಲು ವಂದಿಸಿದರು.