ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಸಿಇಟಿ ಅಣಕು ಪರೀಕ್ಷೆ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಆನ್ ಲೈನ್ ಅಣಕು ಪರೀಕ್ಷೆಯನ್ನು ಆಯೋಜಿಸಿದೆ.
ಇದೇ ತಿಂಗಳ 17, 18, 19 ಮತ್ತು 20 ರಂದು ಕ್ರಮವಾಗಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಪ್ರತಿದಿನದ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತ್ಯೇಕ ಲಿಂಕ್‍ಗಳ ಮೂಲಕ ಲಾಗಿನ್ ಮಾಡಿ ಹಾಜರಾಗಬಹುದು. ಲಿಂಕ್‍ಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಇದರಲ್ಲಿ ಒಂದು ಅಂಕಗಳ 60 ಪ್ರಶ್ನೆಗಳಿದ್ದು, ಪರೀಕ್ಷೆಯು 70 ನಿಮಿಷದ ಅವಧಿಯದ್ದಾಗಿರುತ್ತದೆ. ಪರೀಕ್ಷೆಯ ಅವಧಿ ಮುಗಿದ ತಕ್ಷಣ ಫಲಿತಾಂಶವೂ ಪ್ರಕಟಗೊಳ್ಳುತ್ತದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಲಿಂಕ್‍ಗಳು ಸಕ್ರಿಯವಾಗಿರುತ್ತವೆ. ಸಿಇಟಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಎಲ್ಲಾ ವಿಧ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವುದಕ್ಕೆ ಮುಕ್ತ ಅವಕಾಶವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ತಿಳಿಸಿದ್ದಾರೆ.