ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – 3 ದಿನಗಳ ತಾಂತ್ರಿಕ ಉತ್ಸವ “ಅನ್‍ಬೌಂಡ್”…

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದರಲ್ಲಿಯೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುತ್ತಾರೆ. ಬದಲಾದ ತಾಂತ್ರಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ ತನ್ನಲ್ಲಿರುವ ತಾಂತ್ರಿಕ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ನೀಡುವುದಕ್ಕಾಗಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅನ್‍ಬೌಂಡ್ ಎನ್ನುವ 3 ದಿನಗಳ ತಾಂತ್ರಿಕ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರೀಸರ್ಚ್ ಎಂಡ್ ಪ್ರೆಸೆಂಟೇಶನ್, ಪ್ರಾಬ್ಲೆಮ್ ಸಾಲ್ವಿಂಗ್, ಮೆಷಿನ್ ಲರ್ನಿಂಗ್, ಡೇಟಾ ಪ್ರಾಸೆಸಿಂಗ್, ಸರ್ಕ್ಯೂಟ್ ಡಿಸೈನ್ ಎಂಡ್ ಡಿಬಗ್ಗಿಂಗ್, ಸರ್ವೆ, ಮಾಡೆಲಿಂಗ್, ಯುನಿಟ್ಸ್ ಎಂಡ್ ಮೆಶರ್‍ಮೆಂಟ್ಸ್ ಹೀಗೆ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ 4, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 2, ಸಿವಿಲ್ ವಿಭಾಗದಲ್ಲಿ 2, ಮೆಕ್ಯಾನಿಕಲ್ ವಿಭಾಗದಲ್ಲಿ 2 ಹಾಗೂ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದಂತೆ 1 ಹೀಗೆ ಒಟ್ಟು 11 ವಿಷಯಗಳಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮವನ್ನು ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆಯಲ್ಲಿ ಸಿಲಿಕಾನ್ ಡಿಸೈನ್ ಇಂಜಿನಿಯರ್ ಆಗಿರುವ ಪ್ರಮೋದ್ ಬಾಳಿಗಾ ಉದ್ಘಾಟಿಸಿದರು.
ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಸತ್ಯನಾರಾಯಣ ಭಟ್ ಪ್ರಾಂಶುಪಾಲ ಡಾ. ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಎಲ್‍ಟಿಐ ಮೈಂಡ್‍ಟ್ರೀ ಸಂಸ್ಥೆಯ ಹಿರಿಯ ನಿರ್ದೇಶಕ ಕೃಷ್ಣಮೂರ್ತಿ ಪಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಆಡಳಿತ ಮಂಡಳಿಯ ನಿರ್ದೇಶಕಿ ವಿದ್ಯಾ.ಆರ್.ಗೌರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ. ಮಹೇಶ್‍ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಆರ್ಟಿಫೀಶಿಯಲ್ ಇಂಟೆನಿಜೆನ್ಸ್ ವಿಭಾಗದ ಮುಖ್ಯಸ್ಥ ಡಾ.ಗೋವಿಂದರಾಜ್.ಪಿ, ವಿದ್ಯಾರ್ಥಿ ಸಂಯೋಜಕ ರವಿನಾರಾಯಣ.ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂರುದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಭಯರಾಜ್ ಭಟ್.ಎನ್, ಅಪೇಕ್ಷಾ.ಡಿ, ಮಹೇಶ್.ಪಿಕೆ, ಪ್ರಜ್ಞಾಶಂಕರಿ.ಎಮ್.ಎನ್, ಸಾತ್ವಿಕ್, ಜೀವಿತ್.ಎಸ್, ಶ್ರೀನಿಧಿ.ಡಿ.ವಿ, ಶ್ರೀನಿವಾಸ್ ಹೆಗ್ಡೆ.ಎಂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

unbound2

unbound3

Sponsors

Related Articles

Back to top button