ಕೆಸಿಎಫ್ ಓಮಾನ್ ಫಲಜ್ ಸೆಕ್ಟರ್ ವಾರ್ಷಿಕ ಮಹಾಸಭೆ -ಅಧ್ಯಕ್ಷರಾಗಿ ಶಫೀಕ್ ಎಲಿಮಲೆ ಸುಳ್ಯ…

ಓಮಾನ್: ಕೆಸಿಎಫ್ ಫಲಜ್ ಸೆಕ್ಟರ್ ಇದರ ವಾರ್ಷಿಕ ಸಭೆಯು ಫೆ.25 ರಂದು ಮುಲ್ತಕ ಮಜ್ಲಿಸ್ ನಲ್ಲಿ ಅಝೀಝ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಮುಬೀನ್ ಜೋಕಟ್ಟೆ ವಾಚಿಸಿದರು.
ರಿ. ಒರ್ಘನೈಝಿಂಗ್ ಒಫೀಸರ್ ಆಗಮಿಸಿದ ರಾಷ್ಟ್ರೀಯ ಸಮಿತಿ ಸದಸ್ಯ ಇಕ್ಬಾಲ್ ಎರ್ಮಾಳ್ ರವರು ಕಳೆದ ಸಮಿತಿಯನ್ನು ಬರ್ಕಾಸು ಗೊಳಿಸಿ ನೂತನ ಸಮಿತಿಯನ್ನು ಪುನಃ ರಚಿಸಿದರು.
ನೂತನ ಅಧ್ಯಕ್ಷರಾಗಿ ಶಫೀಕ್ ಎಲಿಮಲೆ ಸುಳ್ಯ,ಉಪದಾಕ್ಷರಾಗಿ ಅಬ್ದುಲ್ ಅಝೀಝ್ ಆನೆಕಲ್ಲು, ಕಾರ್ಯದರ್ಶಿಯಾಗಿ ಅರ್ಫಾಜ್ ಮದಕ ಹಾಗೂ ಕೋಶಾಧಿಕಾರಿಯಾಗಿ ನಿಸಾರ್ ಅಹ್ಮದ್ ಜೆಪ್ಪು ರವರು ಆಯ್ಕೆಯಾದರು. ಅಲ್ಲದೇ ಸಾಂತ್ವನ ವಿಭಾಗದ ಚೇರ್ಮಾನ್‌ ಆಗಿ ಕರೀಂ ಕೂರತ್ ಕನ್ವೀನರ್ ಆಗಿ ನಿಝಾನ್ ಮಲ್ಲೂರು ಆರಿಸಲಾಯಿತು.
ಮಾಧ್ಯಮ ವಿಭಾಗದ ಚೇರ್ಮಾನ್ ಆಗಿ ನಝೀರ್ ಸಾರ್ಯ ಹಾಗೂ ಕಾರ್ಯದರ್ಶಿಯಾಗಿ ಶಬೀರ್ ಅಲಂಕಾರ್ ರವರನ್ನು ಆರಿಸಲಾಯಿತು.ಶಿಕ್ಷಣ ವಿಭಾಗ ಚೇರ್ಮಾನ್‌ ಆಗಿ ಅಲೀ ಹಿಮಮಿ ಉಸ್ತಾದ್ ರವರನ್ನು ಹಾಗೂ ಕನ್ವೀನರ್ ಆಗಿ ನಿಸಾರ್ ಬೊಂದೇಲ್ ರವರನ್ನು ಆರಿಸಲಾಯಿತು.ಇಹ್ಸಾನ್ ವಿಭಾಗದ ಚೇಮಾನ್ ಆಗಿ ಹೈದರ್ ಅಲೀ ಬಂಟ್ವಾಳ ಹಾಗೂ ಕನ್ವೀನರ್ ಆಗಿ ಅಕ್ಬರ್ ಅಲಿ ಕರೋಪಾಡಿ ಅವರನ್ನು ಆರಿಸಲಾಯಿತು.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ಅಝೀಝ್ ಪೊರ್ಕೋಡಿ
ಅಲ್ತಾಫ್ ಅಬ್ದುಲ್ ರಝ್ಝಾಖ್ ಮದಕ ಮುಸ್ತಾಖ್ ಕುಂದಾಪುರ ರಫೀಕ್ ಕಕ್ಕಿಂಜೆಯವರನ್ನು ಆರಿಸಲಾಯಿತು.
ಸೆಕ್ಟರ್ ಪ್ರದಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಯವರು ಸಭೆಯನ್ನು ಸ್ವಾಗತಿಸಿದರು. ಕೋಶಾಧಿಕಾರಿ ನಿಝಾರ್ ಜೆಪ್ಪು ವಂದಿಸಿದರು. ಕೊನೆಗೆ ಯಾ ಅಕ್ ರಮ ಬೈತ್ ಹಾಡಿ ಮೂರೂ ಸ್ವಲಾತ್ ನೊಂದಿಗೆ‌ ಸಭೆಯನ್ನು ಕೊನೆಗೊಳಿಸಲಾಯಿತು.

Sponsors

Related Articles

Back to top button