ಅಕ್ರಮ ಸಿಡಿಮದ್ದು ತಯಾರಿ: ನಾಲ್ವರ ಬಂಧನ….

ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸ್ಪೋಟಕ ಬಳಸಿ ಸಿಡಿಮದ್ದು ತಯಾರಿ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕೇರಳ ಮತ್ತು ತಮಿಳುನಾಡು ರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಕೆಳುಗುಡ್ಡೆ ನಿವಾಸಿ ನರೇಂದ್ರ ಆಲಿಯಾಸ್ ಬಾಬು(45), ತ್ರಿಶೂರ್ ಜಿಲ್ಲೆಯು ಚೆಲಕೆರೆ ನಿವಾಸಿ ಟಿ. ಬಾಬು(53), ತಮಿಳುನಾಡಿನ ವಿರುದ್ದನಗರದ ಟಿ. ಕಾಳಿರಾಜ್(30) ಮತ್ತು ವಿದುರನಗರದ ಎ.ಕಮಲ ಕಣ್ಣನ್(29) ಬಂಧಿತ ಆರೋಪಿಗಳು.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಲಮಜಲು ಎಂಬಲ್ಲಿ ಮಹಿಳೆಯೊಬ್ಬರಿಗೆ ಸೇರಿದ ತೋಟದಲ್ಲಿ ಆರೋಪಿಗಳು ಗುಡಿಸಲು ನಿರ್ಮಿಸಿಕೊಂಡು ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಸಿಡಿಮದ್ದು ತಯಾರಿಸಿ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಪ್ಯ ಎಸ್‍ಐ ಸಕ್ತಿವೇಲು ಅವರ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

24ptr Kaliraj 201x300

24ptr Kannan 202x300 24ptr Narendran 192x300

Related Articles

Leave a Reply

Your email address will not be published. Required fields are marked *